ಮರಿಗಾಗಿ ತಾಯಿ ಆನೆಯ ಹುಡುಕಾಟ

11mnd1
Published on

ಮುಂಡಗೋಡ: ಮರಿ ಆನೆಯನ್ನು ಕಳೆದುಕೊಂಡಿರುವ ತಾಯಿಯು ಮರಿಗಾಗಿ ಅರಣ್ಯ ಪ್ರದೇಶದಲ್ಲಿ ಹುಡುಕಾಡಿ, ಚೀರಾಡಿದ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯ ಬಾಳೆಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಮರಿ ಆನೆಯು ಮೃತ ಸ್ಥಿತಿಯಲ್ಲಿ ಕಂಡು ಬಂದಿತ್ತು. ಅವಧಿಗೂ ಮುನ್ನ ಜನಿಸಿದ್ದರಿಂದ ಹೊಟ್ಟೆಯಲ್ಲಿಯೇ ಮೃತಪಟ್ಟಿತ್ತು.

ಮರಿ ಆನೆಯ ಶವ ನೋಡಲು ಹೋಗಿದ್ದ ವೇಳೆ ತಾಯಿ ಆನೆಯು ಪ್ರತಿರೋಧ ತೋರಿಸಿತ್ತು. ಇದರಿಂದ ಮರಿ ಆನೆಯ ಅಂತ್ಯಕ್ರಿಯೆ ಮಾಡಲು ಅರಣ್ಯ ಅಧಿಕಾರಿಗಳು ಬೇರೆ ಜಾಗ ಗುರುತಿಸಿದ್ದರು. ಉಗ್ಗಿನಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಇನ್ನೊಂದು ಬದಿಗೆ ಶವ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಮರಿಯ ಶವ ಕಾಣದ ತಾಯಿ ಆನೆಯು ಜನ್ಮ ನೀಡಿದ ಜಾಗದ ಸುತ್ತಲೂ ಓಡಾಡಿದೆ.

ಒಂದು ಗಂಡಾನೆ, ಮೂರು ಹೆಣ್ಣಾನೆ ಸಹಿತ ಒಟ್ಟು ನಾಲ್ಕೈದು ಕಾಡಾನೆಗಳ ಗುಂಪು ಉಗ್ಗಿನಕೇರಿ ಸಮೀಪದ ಬಾಳೆಹಳ್ಳಿ ಅರಣ್ಯದಲ್ಲಿ ಬೀಡು ಬಿಟ್ಟಿದ್ದವು. ಮರಿ ಆನೆಯ ಅಂತ್ಯಕ್ರಿಯೆ ಮಾಡುವಾಗ ತಾಯಿ ಆನೆಯು ಭಾರಿ ಶಬ್ದ ಮಾಡಿದೆ. ದೂರದ ಮತ್ತೊಂದು ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಮರಿಗೆ ಹುಡುಕಾಡಿ ನಂತರ ತಂಡದ ಇತರ ಆನೆಗಳೊಂದಿಗೆ ಹೆಣ್ಣಾನೆ ಮುಂದಿನ ಪ್ರದೇಶದತ್ತ ತೆರಳಿರುವ ಸಾಧ್ಯತೆ ಇದೆ ಎಂದು ಎಸಿಎಫ್ ಶ್ರೀಶೈಲ ವಾಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net