

ಬಾಗಲಕೋಟೆ: ಗೌಳಿ ಸಮಾಜದಿಂದ ನವನಗರದ ಸೆಕ್ಟರ್ ನಂ.29ರಲ್ಲಿ ಮರಗಮ್ಮದೇವಿ ಜಾತ್ರಾ ಉತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದ ನಿಮಿತ್ತ ಸೆ. ನಂ. 26 ರಲ್ಲಿಯ ಈಶ್ವರ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಸಾರೋಟಿನಲ್ಲಿ ಇಟ್ಟು ನವನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳಗಳು, ಮಹಿಳೆಯರಿಂದ ಕುಂಭೋತ್ಸೋವ ಮೆರವಣಿಗೆ ಗಮನ ಸೆಳೆದವು. ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಕುಂಭಪೂಜೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಬೆಳಗ್ಗೆ ಮರಗಮ್ಮದೇವಿಗೆ ವಿಶೇಷ ಪೂಜೆ, ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಈ ಸಂದರ್ಭದಲ್ಲಿ ನಾಗೋಜಿ ಲಂಗೋಟೆ, ಮಾರುತಿ ಕಿಲಾಸ್ಕಾರ್, ಸಿದ್ದು ಕಿಲಾಸ್ಕರ್, ಅಂಬಾಜಿ ಕಿಲಾಸ್ಕಾರ್, ಗಿರಜಪ್ಪ ಗಡೆಪ್ಪ, ಸಿದ್ದು ಲಂಗೋಟೆ, ರಾಮ ಗೌಳಿ ಸೇರಿದಂತೆ ಸಮಾಜದ ಹಿರಿಯರು, ಯುವಕರು ಪಾಲ್ಗೊಂಡಿದ್ದರು.