ಮರ ಬಿದ್ದು ಆಟೋ ಚಾಲಕನಿಗೆ ಗಾಯ

21 skpp 3
ಆಟೋದ ಮೇಲೆ ಬಿದ್ದ ಮರ.
Published on

ಸಕಲೇಶಪುರ: ತಾಲೂಕಿನ ಕೆಲಗಳಲೆ ಗ್ರಾಮ ಸಮೀಪ ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಶುಕ್ರವಾರ ಮರ ಉರುಳಿಬಿದ್ದಿದ್ದು, ಚಾಲಕ ಗಾಯಗೊಂಡಿದ್ದಾರೆ.

ಉದೇವಾರ ಗ್ರಾಮದ ಆಟೋ ಚಾಲಕ ಕಾಳಯ್ಯ ಗಾಯಗೊಂಡವರು. ಸುಂಡೆಕೆರೆ ಗ್ರಾಮದಿಂದ ಉದೇವಾರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಕೆಲಗಳಲೆ ಗ್ರಾಮ ಸಮೀಪ ಆಟೋ ಮೇಲೆ ಮರ ಉರುಳಿ ಬಿದ್ದು ಅವಘಡ ಸಂಭವಿಸಿದೆ. ಗಾಯಗೊಂಡ ಚಾಲಕ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net