ಮರ ಕಡಿದ ಅರಣ್ಯಇಲಾಖೆ

18DND1
Published on

ದಾಂಡೇಲಿ: ನಗರ ಸಮೀಪದ ಹಾಳಮಡ್ಡಿ ಗ್ರಾಮ ಬಳಿಯ ಸರ್ವೆ ನಂ. 14 ರಲ್ಲಿನ 1.21 ಹೆಕ್ಟೇರ್ ಜಮೀನಿನಲ್ಲಿ 110 ಮರಗಳನ್ನು ಕಾನೂನು ಬಾಹಿರವಾಗಿ ಅರಣ್ಯ ಇಲಾಖೆಯಿಂದ ಕಡೆಯಲಾಗಿವೆ. ಮರ ಕಡಿಯಲು ಅನುಮತಿ ನೀಡಿದ ಅರಣ್ಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿ ದಾಂಡೇಲಿಯ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧುವಾರ ಸ್ಥಳೀಯ ಅರಣ್ಯ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶೈಲೇಶ ಪರಮಾನಂದ ಅವರಿಗೆ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಪ್ರವೀಣ ಕೊಠಾರಿ, ಹಾಳಮಡ್ಡಿ ಗ್ರಾ.ಪಂ. ಅಧ್ಯಕ್ಷ ಸುಭಾಸ ಭೋವಿವಡ್ಡರ್, ದಾಂಡೇಲಿ ಘಟಕಾಧ್ಯಕ್ಷ ರಾಜೇಶ ಜಲ್ಡಿ ಇದ್ದರು.

ನೆಡುತೋಪು ಬೆಳೆಸಲು ಆದೇಶ
ದಾಂಡೇಲಿ ನಗರಸಭೆಯಿಂದ 2014-15ರಲ್ಲಿ ಒಳಚರಂಡಿ ಸಂಸ್ಕರಣ ಘಟಕ (ಸಿವೆಜ್ ಟ್ರಿಟ್​ವೆುಂಟ್ ಪ್ಲಾಂಟ್) ಆರಂಭಿಸಲು 1.21 ಹೆಕ್ಟೇರ್ ಜಾಗದ ಬೇಡಿಕೆ ಇಡಲಾಗಿತ್ತು. ಸಮಗ್ರ ವಿಚಾರಣೆಯ ನಂತರ ಕೇಂದ್ರದ ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಇಲಾಖೆಯ ಆದೇಶದ ಮೇರೆಗೆ ಸರ್ಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ 2017ರ ಸೆಪ್ಟೆಂಬರ್ 5 ರಂದು ಕೆಲ ನಿರ್ಬಂಧನೆಗಳನ್ನು ಹಾಕಿ ಈ ಜಾಗವನ್ನು ದಾಂಡೇಲಿ ನಗರಸಭೆಗೆ ನೀಡಿದೆ. ಸಂಸ್ಕರಣ ಘಟಕ ನಿರ್ವಣಕ್ಕೆ ಆತಂಕವಾಗಿರುವ 132 ಮರಗಳನ್ನು ಕಟಾವಿಗಾಗಿ ಗುರುತಿಸಲಾಗಿತ್ತು. ಅರಣ್ಯ ಇಲಾಖೆ ಮರು ಪರಿಶೀಲಿಸಿ ಸದರಿ ಯೋಜನೆಗೆ ಆತಂಕವಾಗಿರುವ ಕೇವಲ 110 ಮರಗಳನ್ನು ಕಡೆಯಲು ಗುರುತಿಸಿಕೊಟ್ಟಿತ್ತು. ಉಪಯೋಗಿ ಸಂಸ್ಥ್ಥೆಯಿಂದ ಮರ ಕಟಾವಿಗೆ ಹಣ ಪಾವತಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಕಾರವಾರ ತಾಲೂಕಿನ ಉಳಗಾದ ಸರ್ವೆ ನಂ. 394ರಲ್ಲಿ 1.21 ಹೆಕ್ಟೇರ್ ಜಾಗ ದಲ್ಲಿ 2020-21ನೇ ಸಾಲಿಗೆ ಕಾರವಾರದ ಉಪ ಸಂರಕ್ಷಣಾಧಿಕಾರಿ ಪರಿಹಾರಾತ್ಮಕ ನೆಡು ತೋಪನ್ನು ಬೆಳೆಸುವಂತೆ ಆದೇಶ ನೀಡಲಾಗಿದೆ ಎಂದು ಹಳಿಯಾಳ ಡಿಎಫ್​ಒ ಡಾ. ಅಜ್ಜಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net