ಮನೆಯ ಬೀಗ ಮುರಿದು ನಗ-ನಾಣ್ಯ ಕಳವು

crime
Published on


ಕಲಬುರಗಿ ನಗರದ ಶಹಾಬಾದ ರಸ್ತೆಯಲ್ಲಿರುವ ನೃಪತುಂಗ ಕಾಲನಿಯಲ್ಲಿ ಮನೆಯೊಂದರ ಬೀಗ ಮುರಿದು ನಗ-ನಾಣ್ಯ ಕಳವು ಮಾಡಿದ ಘಟನೆ ನಡೆದಿದೆ.
ಶಂಕರ ದೇಶಮುಖ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ನಿವೃತ್ತ ಉದ್ಯೋಗಿಯಾಗಿರುವ ಅವರು ಬೆಂಗಳೂರಿನಲ್ಲಿರುವ ಪುತ್ರನ ಮನೆಗೆ ಪತ್ನಿ ಜತೆಗೂಡಿ ಹೋಗಿದ್ದರು. ಈ ವೇಳೆಯಲ್ಲಿ ಕಳ್ಳರು ಹೊಂಚು ಹಾಕಿ ಮನೆಯ ಬೀಗ ಮುರಿದು ಆಲಮರಾ ಒಡೆದು ಅದರಲ್ಲಿದ್ದ ೧೫ ಗ್ರಾಂ ಚಿನ್ನಾಭರಣ, ಸ್ವಲ್ಪ ನಗದು ಹಣ ಕಳವು ಮಾಡಿಕೊಂಡು ಹೋಗಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net