ಮನೆಗೆ ಬೆಂಕಿ ತಲುಗು, ಅಪಾರ ಹಾನಿ

05
Published on

ಬೆಳಗಾವಿ: ಅಡುಗೆ ಮಾಡುವ ವೇಳೆ ಬೆಂಕಿ ಕಿಡಿ ಬಟ್ಟೆಗೆ ತಗುಲು ಮನೆ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಭಾನುವಾರ ಅನಂತ ಶೈಣೈ ನಗರದಲ್ಲಿ ಸಂಭವಿಸಿದೆ. ಶಶಿಕಲಾ ಅಪ್ಪಾಸಾಹೇಬ ಅಂಕಲೆ ಮನೆಯಲ್ಲಿ ಅಡುಗೆ ಮಾಡುವ ವೇಳೆ ಬೆಂಕಿ ಹೊತ್ತಿಸಿದ್ದಾಳೆ.

ಈ ವೇಳೆ ಬೆಂಕಿ ಕಿಡಿ ಹಾರಿ ಅಲ್ಲೆಯೇ ಇದ್ದ ಬಟ್ಟೆಗೆ ಬೆಂಕಿ ಹೊತ್ತಿದೆ. ಪರಿಣಾಮ ಮನೆಯ ಕಟ್ಟಿಗೆ ಚಾವಣಿಗೆ ಬೆಂಕಿ ಆವರಿಸಿಕೊಂಡು ಈ ಘಟನೆ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net