ಮನೆಗಳೆಲ್ಲ ದೇವಮಂದಿರಗಳಾಗಲಿ

16HLY-1
Published on

ಹಳಿಯಾಳ: ದೇಶವು ರಾಮರಾಜ್ಯವಾಗಬೇಕು, ಅದಕ್ಕಾಗಿ ಶ್ರೀರಾಮನ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ನಮ್ಮ ಮನೆಗಳೆಲ್ಲ ದೇವಮಂದಿರಗಳಾಗಬೇಕು ಎಂದು ಕೆ.ಕೆ. ಹಳ್ಳಿ ನಿತ್ಯಾನಂದ ಆಶ್ರಮದ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಶ್ರೀರಾಮಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಧಾರ್ವಿುಕ ಪೂಜಾವಿಧಿಯ ಸಾನ್ನಿಧ್ಯ ವಹಿಸಿದ್ದ ಅವರು, ನಿಧಿ ಸಮರ್ಪಣಾ ಮಹಾಅಭಿಯಾನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಶ್ರೀ ರಾಮನ ನಾಮ ಸ್ಮರಣೆಯಿಂದಲೇ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮಾನವ ಜನ್ಮ ಸಾರ್ಥಕತೆಗೆ ರಾಮನ ತತ್ವಗಳ ಪಾಲನೆಯೇ ಮುಖ್ಯ ಮಾರ್ಗ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಆದಿಶಕ್ತಿ ಪೀಠದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಶ್ರೀರಾಮನ ಮಂದಿರ ನಿರ್ವಣಕ್ಕೆ ಯಾವುದೇ ಕೊರತೆ ಇಲ್ಲ. ಈ ನಿಧಿ ಸಂಗ್ರಹಣಾ ಅಭಿಯಾನವು ಭಾರತೀಯರಲ್ಲಿ ಧರ್ಮ, ಪ್ರೀತಿ, ಗೌರವ ಹಾಗೂ ದೇಶ ಭಕ್ತಿ ಜಾಗೃತಗೊಳಿಸುವ ಒಂದು ಮಾರ್ಗವಾಗಿದೆ ಎಂದರು.

ವಿಎಚ್​ಪಿ ರಾಜ್ಯ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿಎಚ್​ಪಿ ಅಧ್ಯಕ್ಷ ಶ್ರೀಪತಿ ಭಟ್ ವಹಿಸಿದ್ದರು. ಯಡೋಗಾದ ಶ್ರೀ ಸಿದ್ಧಾರೂಢ ಆಶ್ರಮದ ನಿರ್ಮಲಾತಾಯಿ, ಮಾಜಿ ಶಾಸಕ ಸುನೀಲ ಹೆಗಡೆ, ಹಿಂದು ಮಹಾಸಭಾದ ಅಧ್ಯಕ್ಷ ರಾಜು ದೂಳಿ, ಪ್ರಮುಖರಾದ ಎನ್.ಜಿ. ಪಾಟಕಣರ, ಉದಯ ಹೂಲಿ, ಚಂದ್ರು ಕಮ್ಮಾರ, ಶಿವಾಜಿ ನರಸಾನಿ, ಅಜೋಬಾ ಕರಂಜೇಕರ, ಅನಿಲ ಮುತ್ನಾಳ, ಸತ್ಯಜಿತ ಗಿರಿ, ಪ್ರಸಾದ ಹುಣ್ಸವಾಡಕರ ಇದ್ದರು. ಯಲ್ಲಪ್ಪಾ ಮಾಳವಣಕರ ನಿರ್ವಹಿಸಿದರು.

ದೇಣಿಗೆ: ಹಳಿಯಾಳ ಶ್ರೀರಾಮ ಮಂದಿರದ ಧರ್ಮದರ್ಶಿಗಳಾದ ಗೋಸಾವಿ ಸಮಾಜದ ಪ್ರಮುಖರು, ವಿಪ ಸದಸ್ಯ ಎಸ್.ಎಲ್. ಘೊಟ್ನೇಕರ, ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಅಯೋಧ್ಯೆ ಕರಸೇವಕ ಉಮೇಶ ಬೊಳಶೆಟ್ಟಿ ದೇಣಿಗೆ ನೀಡಿದರು. ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು 5 ಲಕ್ಷ ರೂ. ಗಳ ಚೆಕ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net