

ಬಾಗಲಕೋಟೆ: ಅಗತ್ಯ ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಮಾತ್ರ ಈವರೆಗೆ ಅಂಚೆ ಮತದಾನ ಮಾಡುವ ಹಕ್ಕು ನೀಡಲಾಗಿತ್ತು. ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಹಿರಿಯ ಜೀವಿಗಳು, ಅಂಗವಿಕಲರಿಗೆ, ಕೋವಿಡ್ ಸೋಂಕಿತರು ಮನೆಯಿಂದ ಮತದಾನ ಮಾಡುವ ಅವಕಾಶ ಕಲ್ಪಿಸಿದ್ದು, ಇದರಿಂದ ಹಿರಿಯ ಜೀವಗಳು, ಅಂಗವಿಕಲರು ನಿಟ್ಟುಸಿರು ಬಿಟ್ಟು ಹಕ್ಕು ಚಲಾಯಿಸಲು ಮುಂದಾಗಿದ್ದಾರೆ..!!
ಚುನಾವಣೆ ಆಯೋಗದ ವಿನೂತನ ಪ್ರಯೋಗಕ್ಕೆ ಹಿರಿಯರ ಮತದಾರರು, ಅಂಗವಿಕಲರು ನೆಮ್ಮದಿಗೆ ಜಾರುವಂತಾಗಿದೆ. ಬಿಸಿಲಿನ ತಾಪದ ನಡುವೆ ಮತಚಲಾವಣೆ ಕಷ್ಟದಾಯಕವಾಗಿತ್ತು. ಅದರಲ್ಲೂ ಕೋವಿಡ್ ಸೋಂಕಿತರು ಹೊರಗೆ ಓಡಾಡುವಂತಿಲ್ಲ. ಮತದಾನದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ ಆಯೋಗ. ಜಿಲ್ಲೆಯಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.
ಆಯೋಗದ ಹೊಸ ಗೈಡಲೈನ್ಸ್ ಏನು:
ಅಗತ್ಯ ಸೇವೆಗಳ ಮೇಲೆರುವ ಗೈರು ಹಾಜರಿ ಮತದಾರರು, ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರಿಗೆ, ಕೋವಿಡ್ ಸೋಂಕಿತರು ಹಾಗೂ ಬಾಽತ ವ್ಯಕ್ತಿಗಳ ಪ್ರವರ್ಗದಲ್ಲಿನ ಗೈರು ಹಾಜರಿ ಮತದಾರರಿಗೆ ಮನೆಯಿಂದ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೇ ಮತದಾನ ಮಾಡುವ ಆಯಾ ಬೂತನ ಬಿಎಲ್‌ಒಗಳು ಅವರಿಗೆ ಮನೆಗೆ ಹೋಗಿ ಈ ಬಗ್ಗೆ ಪರಿಶೀಲಿಸುತ್ತಾರೆ. ಮತದಾರರು ಇಚ್ಛಿಸಿದಲ್ಲಿ ಮನೆಯಿಂದ ಇಲ್ಲವೇ ಬೂತಗೆ ಬಂದು ಮತಚಲಾಯಿಸುತ್ತೇವೆ ಅಂತ ಆಯೋಗ ಸೂಚನೆ ನೀಡಿರುವ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ನಂತರ ಅದಕ್ಕೆ ಆಯೋಗ ಒಪ್ಪಿಗೆ ಸೂಚಿಸುತ್ತದೆ.
ಯಾವ ರೀತಿ ನಡೆಯುತ್ತಿದೆ ಕಾರ್ಯ:
ಈಗಾಗಲೇ ಆಯೋಗ ನಿಯಮದಂತೆ ಬಿಎಲ್‌ಒಗಳು ಮನೆ ಮನೆಗಳಿಗೆ ತೆರಳಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಒಪ್ಪಿಗೆ ಸೂಚಿಸಿದ ಮನೆಗಳಿಗೆ ತೆರಳಿ ಚುನಾವಣೆ ಅಽಕಾರಿಗಳ ಸಮ್ಮುಖದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸುತ್ತದೆ. ಇದರಲ್ಲಿ ಯಾವುದೇ ಗೊಂದಲ, ಗೋಲಮಾಲ್ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಚುನಾವಣೆ -Àಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರಬಾರದು ಅಂತ ರಾಜಕೀಯ ಪಕ್ಷಗಳ ಮುಖಂಡು ಚುನಾವಣೆ ಅಽಕಾರಿಗಳು ಮನವಿ ಮಾಡಿದ್ದಾರೆ. ಹೀಗಾಗಿ ಅಽಕಾರಿಗಳು, ಸಂಬಂಧಪಟ್ಟ ಸಿಬ್ಬಂದಿಗಳು ಅತ್ಯಂತ ಜಾಗೃತಿ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟವರು ೩೨೧೧೨ ಮತದಾರರು ಇದ್ದರೇ, ಅಂಗವಿಕಲರು ೨೧೩೧೭ ಮತದಾನ ಹಕ್ಕು ಹೊಂದಿದ್ದಾರೆ. ಅನೇಕ ಮನೆಯಿಂದ ಮತದಾನಕ್ಕೆ ಒಪ್ಪಿಗೆ ಸೂಚಿಸಿದ್ದರೇ, ಕೆಲವರು ನಿರಾಕರಣೆ ಮಾಡಿದ್ದಾರೆ. ಮತದಾರರ ಸ್ವಯಂ ನಿರ್ಧಾರದ ಮೇಲೆ ಎಲ್ಲವು ಅವಲಂಬಿತವಾಗಿದೆ.