

ಪಾಂಡವಪುರ: ಆದಿಚುಂಚನಗಿರಿ ಮಠ ಜಾತಿಯ ಹೊರತಾಗಿ ಕೆಲಸ ಮಾಡುತ್ತಿದೆ. ಮಠದ ಗುರುಗಳು ಎಂದೂ ಜಾತಿ-ಭೇದ ಮಾಡದೆ ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದು ಆದಿಚುಂಚನಗಿರಿ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಹೇಳಿದರು.
ತಾಲೂಕಿನ ಚಿನಕುರಳಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಹಾಗೂ ಮಕ್ಕಳ ಸಂತೆ, ಆಹಾರ ಮೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಠದ ಗುರುಗಳು ಎಂದಿಗೂ ಜಾತಿ-ಭೇದ, ಮತ-ಪಂಥ ಎಂದು ವಿಂಗಡಣೆ ಮಾಡಿದವರಲ್ಲ. ಎಲ್ಲ ಸಮುದಾಯವನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಚುಂಚನಗಿರಿ ಮಠವು ಜಾತಿ ಹೊರತುಪಡಿಸಿ ಮನುಷ್ಯ ಜಾತಿ ಪರಿಕಲ್ಪನೆಯಡಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಕನಕದಾಸರ ಜಯಂತಿಯ ಅಂಗವಾಗಿ ಆ ಸಮುದಾಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಶಿಕ್ಷಣ ಸಂಸ್ಥೆ ವತಿಯಿಂದ ಅಭಿನಂದನೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಜಯಂತಿ ಕಾರ್ಯಕ್ರಮದಲ್ಲೂ ಆಯಾ ಸಮುದಾಯದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಕ್ಕಳಿಗೆ ವ್ಯವಹಾರಿಕ ಜ್ಞಾನ, ವ್ಯಾಪಾರ ವಹಿವಾಟು, ಲಾಭ-ನಷ್ಟದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಸಿದ್ದೇವೆ. ಮಕ್ಕಳು ಸಂತೆಯಲ್ಲಿ ಭಾಗವಹಿಸಿ ತರಕಾರಿ, ಹಣ್ಣು ಮಾರಾಟ ಮಾಡಿದ್ದಾರೆ. ಮಕ್ಕಳ ಸಂತೆ ಯಶಸ್ಸಿಗೆ ಪಾಲಕರು, ಶಿಕ್ಷಕರ ಸಹಕಾರ ಹೆಚ್ಚಿದೆ ಎಂದರು.
ಸಮಾಜ ಸೇವಕ ಕೆ.ಆರ್.ಪೇಟೆ ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿಗಳು ಭಕ್ತ ಕನಕದಾಸರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಮುನ್ನಡೆಯುವ ಕೆಲಸ ಮಾಡಬೇಕು ಎಂದರು.
ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿ.ಸ್ವಾಮಿಗೌಡ, ಶಿವೇಗೌಡ, ಚನ್ನಮಾದೇಗೌಡ, ಕರೀಗೌಡ, ಎಸ್.ರೇವಣ್ಣ, ಮಾಯಮ್ಮ, ಮಹದೇವಮ್ಮ, ಶಿವಣ್ಣ, ಗೋಪಾಲಗೌಡ, ಕಳಸಯ್ಯ, ನಿಂಗೇಗೌಡ, ಈ.ರಾಜು, ಕಾಂತರಾಜು, ಸುಚಿತ್ರಾ ಅವರನ್ನು ಅಭಿನಂದಿಸಲಾಯಿತು.
ಬಿ.ಎಸ್.ಜಯರಾಮು, ಸಿ.ಆರ್.ರಮೇಶ್, ಕುಮಾರಸ್ವಾಮಿ, ಎಸ್.ರಾಜು, ಎಸ್.ನಾಗಸುಂದರ್, ಕೃಷ್ಣೇಗೌಡ, ರವಿಕುಮಾರ್, ಪ್ರಕಾಶ್, ಪ್ರಾಂಶುಪಾಲ ಚಿದಂಬರ್ ಹಾಜರಿದ್ದರು.