ಮನಸ್ಸು, ದೇಹ ಬೆಳವಣಿಗೆಗೆ "ಅಂಕುರ್​' ಸಹಕಾರಿ

CUK
Published on

ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯ ಒಂದು ಸಣ್ಣ ಭಾರತವಿದ್ದಂತೆ. ನಮ್ಮಲ್ಲಿ ೨೦ಕ್ಕೂ ಹೆಚ್ಚು ರಾಜ್ಯಗಳ ವಿದ್ಯರ‍್ಥಿಗಳಿದ್ದಾರೆ. ಅವರು ವಿಶ್ವವಿದ್ಯಾಲಯಕ್ಕೆ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ ತರುತ್ತಾರೆ ಎಂದು ರ‍್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ರ‍್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಸತಿಕ, ಕ್ರೀಡೆ ಮತ್ತು ನಾವೀನ್ಯತೆ ಉತ್ಸವದ "ಅಂಕುರ್​&೨೦೨೫' ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಎಲ್ಲ ೇತ್ರಗಳಲ್ಲಿ ನಿಮ್ಮ ಪ್ರತಿಭೆ ಪ್ರರ‍್ಶಿಸಿದ್ದೀರಿ. ಕ್ರೀಡೆ ಮತ್ತು ಸಾಂಸತಿಕ ಕರ‍್ಯಕ್ರಮಗಳಿಲ್ಲದೆ ನಾವೆಲ್ಲರೂ ಯಂತ್ರಗಳಂತೆ. ಸಿಯುಕೆ ನಮ್ಮ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಶ್ವವಿದ್ಯಾಲಯವಾಗಿದೆ. "ಅಂಕುರ್​' ವಿದ್ಯರ‍್ಥಿಗಳ ಪ್ರತಿಭೆ ಮತ್ತು ಸೃಜನಶೀಲತೆ ತೋರಿಸಲು ಒಂದು ಅವಕಾಶ ಒದಗಿಸಿಕೊಡುತ್ತದೆ. ನಿಮ್ಮ ಮನಸ್ಸು, ದೇಹ ಮತ್ತು ಆತ್ಮದ ಒಟ್ಟಾರೆ ಬೆಳವಣಿಗೆಗಾಗಿ ಇಂತಹ ಕರ‍್ಯಕ್ರಮ ಸಹಕಾರಿ ಎಂದರು.

ಪದ್ಮಶ್ರೀ ಡಾ.ವಿಜಯಲಕ್ಷಿ$್ಮ ದೇಶಮಾನೆ ಮಾತನಾಡಿ, ಜೀವನ ಸುಂದರ ಆಚರಣೆ. ನಾನು ಕಲಬುರಗಿಯ ಕೊಳಚೆ ಪ್ರದೇಶದಲ್ಲಿ ಹುಟ್ಟಿ ಬೆಳೆದವಳು. ನನ್ನ ತಾಯಿ ತರಕಾರಿ ಮಾರುತ್ತಿದ್ದರು. ಸಮಾಜ ನನ್ನ ಜೀವನ ರೂಪಿಸಿದೆ. ಸಮಾಜಕ್ಕೆ ನಮ್ಮ ಬದ್ಧತೆ ಇದ್ದರೆ ಅದು ನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ಆದ್ದರಿಂದ ನೀವೆಲ್ಲರೂ ಬದ್ಧತೆಯಿಂದ ಓದಿ ಮತ್ತು ಸಮಾಜಕ್ಕಾಗಿ ದುಡಿಯಿರಿ ಎಂದು ಕರೆ ನೀಡಿದರು.

ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಮಾತನಾಡಿದರು. ಪ್ರಮುಖರಾದ ಡಾ.ರಾಜೀವ್​ ಜೋಶಿ, ಡಾ.ಕೋಟ ಸಾಯಿಕೃಷ್ಣ, ಡಾ.ಬಸವರಾಜ್​ ಎಂ.ಎಸ್​., ಡಾ.ಅಖಿಲೇಶ, ಡಾ.ಆಂಜನೇಯಲು, ಡಾ.ಸಾಯಿ ಅಭಿನವ್​ ಇತರರಿದ್ದರು.

ಸಾಂಸತಿಕ ಕರ‍್ಯಕ್ರಮದಲ್ಲಿ ಮಾನವಿಕ ಮತ್ತು ಭಾಷಾ ನಿಕಾಯ, ಕ್ರೀಡೆಯಲ್ಲಿ ಇಂಜಿನಿಯರಿಂಗ್​ ನಿಕಾಯ ಹಾಗೂ ಅಥ್ಲೆಟಿಕ್ಸ್​ನಲ್ಲಿ ವ್ಯವಹಾರ ಅಧ್ಯಯನ ನಿಕಾಯಗಳು ಪ್ರಥಮ ಸ್ಥಾನ ಪಡೆದವು. ವಿದ್ಯರ‍್ಥಿ ಕಲ್ಯಾಣ ವಿಭಾಗದ ಡೀನ್​ ಡಾ.ಬಸವರಾಜ ಕುಬಕಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಎಂ.ಪ್ರಶಾಂತ್​ ಸ್ವಾಗತಿಸಿದರು. ಡಾ.ಸ್ವಪಿನ್​ ಚಾಪೇಕರ್​ ಮತ್ತು ಡಾ.ಅಂಕಿತಾ ನಿರೂಪಣೆ ಮಾಡಿದರು. ಡಾ.ನಿತೀನ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net