ಮನ ಪರಿವರ್ತನೆಗೊಂಡು ಮಹಾಯೋಗಿಯಾದ ವೇಮನ

bkt-19-1
Published on

ಬಾಗಲಕೋಟೆ:  ಜೀವನದಲ್ಲಿ ಬರುವ ಬೋಗ, ಭಾಗ್ಯಗಳು ಕ್ಷಣಿಕ ಸುಖದವು ಎಂದರಿತು ಮನ ಪರಿವರ್ತನೆಗೊಂಡ ಮಹಾಯೋಗಿ ವೇಮನ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ವiತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನನ 613ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವೇಮನರು ನಾಲ್ಕು ಸಾಲುಗಳ್ಳುಳ ಚೌಪದಿ ವಚನಕಾರರಾಗಿದ್ದು, ಲೋಕದಲ್ಲಿ ಜನಿಸಿದ ಪ್ರತಿಯೊಬ್ಬರು ಜಾತಿ-ಮತ ಪಂಥಗಳನ್ನು ಬದಿಗಿರಿಸಿ ಸ್ನೇಹ ಸೌಹಾರ್ದತೆಯಿಂದ ಬದುಕಬೇಕೆಂದು ಸಾರಿ ಸಾರಿ ಹೇಳಿದ್ದಾರೆ.

ಪ್ರತಿಯೊಬ್ಬರು ಜವಾಬ್ದಾರಿಯ ಬದುಕು ಕಟ್ಟಿಕೊಳ್ಳಬೇಕೆಂಬ ಸಂದೇಶ ನೀಡಿ ತಂದೆ-ತಾಯಿಯರಲ್ಲಿ ದಯೆ ತೋರದ ಪುತ್ರ ಹುಟ್ಟಿದರೇನು, ಸತ್ತರೇನು. ಹುತ್ತದಲ್ಲಿ ಗೆದ್ದಲು ಹುಟ್ಟವೇ? ಸಾಯವೇ? ಎಂದು ವಚನ ರಚಿಸಿದ್ದು, ಮಾತಾ-ಪಿತೃರ ಮೇಲಿರುವ ಭಕ್ತಿ ಎಂತಹದು ಎಂದು ತೋರುತ್ತದೆ. ಇಂತಹ ಮಹಾನ ಯೋಗಿಯ ತತ್ವಗಳನ್ನು ಮೈಗೂಡಿಸಿಕೊಂಡಾಗ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು. ನವನಗರದಲ್ಲಿ ನಿರ್ಮಿಸಲಾಗುತ್ತಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ತಮ್ಮ ಅನುದಾನದಲ್ಲಿ 5 ಲಕ್ಷ ರೂ.ಗಳನ್ನು ನೀಡುವದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡುತ್ತ ಮಹಾಯೋಗಿ ವೇಮನ ಮತ್ತು ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಇಬ್ಬರು ಒಂದೇ ಕುಟುಂಬದವರಾಗಿದ್ದು, ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇವರು ಲೋಕಾರೂಡಿಯಂತೆ ಒಂದು ಕುಲದಲ್ಲಿ ಜನಿಸಿದ್ದರೂ ಜಾತಿ ರಹಿತವಾದ ಜೀವನ ಸಾಗಿಸಿ ಮಾನವರೆಲ್ಲ ಒಂದೇ ಎಂಬ ಸಂದೇಶವನ್ನು ಸಾರಿದ್ದಾರೆ.

ನಾನು ಚಿಕ್ಕವನಿದ್ದಾಗ ನಮ್ಮ ಊರಲ್ಲಿ ಪ್ರದರ್ಶನಗೊಂಡ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ ನನ್ನ ಜೀವನದಲ್ಲಿ ಪರಿಣಾಮ ಬೀರಿತು. ಮಲ್ಲಮ್ಮ ಹಾಗೂ ವೇಮನರಂತಹವರ ತತ್ವ ಆದರ್ಶಗಳು ಮುಂದಿನ ಜನಾಂಗಕ್ಕೆ ತಿಳಿಯಲೆಂದು ಇದನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ನವನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಹೇಮರಡ್ಡಿ ದೇವಸ್ಥಾನಕ್ಕೆ 10 ಲಕ್ಷ ರೂ.ಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೀಡುವದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಮಾತನಾಡಿ ವೇಮನ ಹೆತ್ತವರಿಂದ ಒಡಹುಟ್ಟಿದವರಿಂದ ಸಂಬಂಧಿಕರಿಂದ ಅನಾದರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗಿದ್ದ ಸಂದರ್ಭದಲ್ಲಿ ಪರಸ್ತ್ರೀ ಸಂಗದಲ್ಲಿ ತೊಡಗಿ ಸಂಪತ್ತನ್ನೆಲ್ಲ ಹಾಳು ಮಾಡುತ್ತಿರುವ ಸಮಯದಲ್ಲಿ ಇವನನ್ನು ಹೇಮರಡ್ಡಿ ಮಲ್ಲಮ್ಮ ಪರಿವರ್ತನೆ ಮಾಡುವಲ್ಲಿ ಸಫಲಳಾಗಿದ್ದಾಳೆ ವೇಮನರ ಹಲವಾರು ವಚನಗಳು ಲೌಕಿಕದ ಅಂಕು-ಡೊಂಕುಗಳನ್ನು ತಿದ್ದುವ ದಾರಿದೀಪಗಳಾಗಿದ್ದು ನಾವೆಲ್ಲರೂ ಅವರ ತತ್ವಗಳನ್ನು ಅಳವಡಿಸಿಕೊಳ್ಳೋಣ ಎಂದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬಾಗಲಕೋಟೆ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ವೇಮನನ ಸಮಗ್ರ ಜೀವನದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಹೇಮ-ವೇಮ ಸಂಸ್ಥೆಯ ಅಧ್ಯಕ್ಷ ಆರ್.ಎಲ್.ಕಟಗೇರಿ, ನಾರಾಯಣ ಹಾದಿಮನಿ, ಎಚ್.ಎಸ್.ನಾಲತ್ವಾಡ, ಎಸ್.ಬಿ.ಮಾಚಾ, ಈಶ್ವರ ಕೋನಪ್ಪನವರ ಹಾಜರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸ್ವಾಗತಿಸಿದರು. ಕೊನೆಗೆ ರಡ್ಡಿ ಸಮಾಜದ ಅಧ್ಯಕ್ಷ ಮಹೇಶ ಕಕರಡ್ಡಿ ವಂದಿಸಿದರು. ಶಂಕರಲಿಂಗ ದೇಸಾಯಿ, ಉಮಾ ಕೆಳಗಿನಮನಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net