

ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಖುರ್ಚಿಗಾಗಿ ಅಽಕಾರ ಹಸ್ತಾಂತರದ ಕಿತ್ತಾಟ ಮುಗಿಲು ಮುಟ್ಟಿದೆ. ಕೆಲವರು ಸಿದ್ದರಾಮಯ್ಯ ಅವರು ನವೆಂಬರ್‌ನಲ್ಲಿ ಅಽಕಾರ ಕಳೆದುಕೊಳ್ಳುತ್ತಾರೆ ಎಂದರೆ ಕೆಲವರು ದಸರಾ ಬಳಿಕ ಎನ್ನುತ್ತಿದ್ದಾರೆ. ಆದರೆ, ನಾವು ಮಾಡಿರುವ ಅಧ್ಯಯನ ಪ್ರಕಾರ ಖುರ್ಚಿ ಕಿತ್ತಾಟದಲ್ಲಿ ಸಿದ್ದರಾಮಯ್ಯ ಅವರು ದಸರಾ ಹಬ್ಬಕ್ಕೂ ಮುನ್ನವೇ ಅಽಕಾರ ಕಳೆದುಕೊಂಡು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದರು.
ಬಾಗಲಕೋಟೆಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಬೇರೆಯವರಿಗೆ ಬಿಟ್ಟು ಕೊಡಲ್ಲ. ನೀರಿನಿಂದ ಮೀನನ್ನು ಹೊರಗೆ ಹಾಕಿದಂತ ಪರಿಸ್ಥಿತಿ ಅವರದ್ದಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕೂ ಮುನ್ನವೇ ಸರ್ಕಾರವೇ ಬಿದ್ದು ಹೋಗಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ವಿಶ್ಲೇಷಿಸಿದರು.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಸರ್ಕಾರದ ವಿರುದ್ಧ ಯಾವುದೇ ಒಂದು ವಿಷಯ ಹೊರಬಂದಾಗ ಅದನ್ನು ಡೈವರ್ಟ್ ಮಾಡಲು ಕಾಂಗ್ರೆಸ್ ಕಸರತ್ತು ನಡೆಸುತ್ತದೆ. ಆರ್‌ಸಿಬಿ ಗೆಲುವಿನ ವಿಜಯೋತ್ಸವದಲ್ಲಿ ಸರ್ಕಾರದ ತಪ್ಪಿನಿಂದ ೧೧ ಜನರು ಕಾಲ್ತುಳಿತಕ್ಕೆ ಸಿಕ್ಕು ಸಾವನ್ನಪ್ಪಿದರು. ಈ ಘಟನೆಯಲ್ಲಿ ಅನೇಕರು ಅಽಕಾರ ಕಳೆದುಕೊಳ್ಳಲಿದ್ದರು. ಈ ಪ್ರಕರಣದ ದಿಕ್ಕು ತಪ್ಪಿಸಲು ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ನಾಟಕ ಶುರುಮಾಡಿ ಜಾತಿ ಸಮೀಕ್ಷೆಯ ವಿಚಾರ ಎಳೆದುತಂದು ಮತ್ತೆ ಮರುಸಮೀಕ್ಷೆ ಮಾಡುತ್ತೇವೆ ಎಂದು ವಿಷಯ ಬದಲಿಸಿದರು.
ಇನ್ನು ಒಂದುವರೆ ವರ್ಷ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ :
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಡೆದಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ನನ್ನ ರಾಜಕೀಯ ಜೀವನದಲ್ಲಿ ನೋಡಿದಂತೆ ಬಿಜೆಪಿಯಲ್ಲಿ ಅಧ್ಯಕ್ಷರ ಅವಽ ಮೂರು ವರ್ಷಕ್ಕಿಂತ ಮೊದಲೇ ಬದಲಾಯಿಸಿದ್ದನ್ನು ನಾನು ಕಂಡಿಲ್ಲ. ವಿಜಯೇಂದ್ರ ಅವರು ಅಧ್ಯಕ್ಷರಾಗಿ ಒಂದುವರೆ ವರ್ಷವಾಗಿದೆ. ಹೀಗಾಗಿ ಇನ್ನು ಒಂದುವರೆ ವರ್ಷ ಅವರೇ ಮುಂದುವರೆಯಲಿದ್ದಾರೆ. ಅದಾದ ಬಳಿಕ ಹೈಕಮಾಂಡ್ ಯಾರನ್ನು ಅಧ್ಯಕ್ಷರೆಂದು ಮಾಡುತ್ತಾರೋ ಅದಕ್ಕೆ ಬದ್ಧ ಇರುತ್ತೇವೆ. ಸದ್ಯಕ್ಕಂತೂ ಅವರೇ ಮುಂದುವರೆಯುವ ವಿಶ್ವಾಸ ತಮಗಿದೆ ಎಂದರು.
ಇನ್ನು ವಿಪಕ್ಷ ನಾಯಕ ಆರ್.ಅಶೋಕ ಅವರು ಸಹ ಸದನದ ಒಳಗೆ ಹಾಗೂ ಹೊರಗೆ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ತಮ್ಮ ಶಕ್ತಿ ಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಆಡಳಿತ ಕಾಂಗ್ರೆಸ್ ಸರ್ಕಾರ ತಾನು ವಿಪಕ್ಷದಲ್ಲಿ ಇದ್ದಾಗ ಒಂದು ನೀತಿ, ಅಽಕಾರದಲ್ಲಿ ಇದ್ದಾಗ ಮತ್ತೊಂದು ನೀತಿ ಅನುಸರಿಸುವ ಮೂಲಕ ವಿಪಕ್ಷ ನಾಯಕರು ಹಾಗೂ ಸ್ವಪಕ್ಷದ ಶಾಸಕರಿಗೂ ಸಹ ಕಿಮ್ಮತ್ತು ಕೊಡುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮ್ಮನೆ ಬಿಟ್ಟರೆ ಐಎಎಸ್ ಅಽಕಾರಿಗಳನ್ನು ಒದೆಯುತ್ತಾರೆ:
ಕಾಂಗ್ರೆಸ್ ಸರ್ಕಾರ ಯಾರಿಗೂ ಸಹ ಸರಿಯಾದ ಗೌರವ ಕೊಡುವುದಿಲ್ಲ. ಅದು ಆಡಳಿತ ಪಕ್ಷದ ಶಾಸಕರೇ ಇರಲಿ, ವಿಪಕ್ಷದ ಸದಸ್ಯರೇ ಇರಲಿ. ಯಾರಿಗೂ ಕಿಮ್ಮತ್ತು ಕೊಡಲ್ಲ. ಐಎಎಸ್ ಅಽಕಾರಿಗಳಿಗೂ ಸಹ ಹೇಗೆ ಬೇಕೋ ಹಾಗೆ ಮಾತನಾಡುತ್ತಾರೆ. ಇವರನ್ನು ಹೀಗೆ ಬಿಟ್ಟರೆ ಐಎಎಸ್ ಅಽಕಾರಿಗಳನ್ನು ಕೆಳಗೆ ಹಾಕಿ ಒದೆಯುತ್ತಾರೆ ಎಂದು ದೂರಿದರು.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಹಾರ ಚುನಾವಣೆಗಾಗಿ ಹಣ ವಸೂಲಿಗೆ ಇಳಿದಿದೆ. ಯಾವುದೇ ಇಲಾಖೆ ತೆಗೆದುಕೊಂಡರೂ ಅಲ್ಲಿ ಹಗರಣ ನಡೆಯುತ್ತಿವೆ. ಇದನ್ನು ಅವರದ್ದೆ ಪಕ್ಷದ ಶಾಸಕರು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಯಲ್ಲಿ ಸಚಿವೆ ಲಕ್ಷಿ÷್ಮÃ ಹೆಬ್ಬಾಳ್ಕರ್ ಮಹಿಳೆಯರಿಗೆ ಕೊಟ್ಟಿರುವ ಎರಡು ಸಾವಿರ ರೂ.ಗಳಿಗೆ ಸಚಿವ ಜಮೀರ್ ಅಹ್ಮದ್ ಅವರು ಬಡ್ಡಿ ಸಮೇತ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.