

ಬಾಗಲಕೋಟೆ: ರಾಜ್ಯದಲ್ಲಿ ನ.೨೦ ರಂದು ಲಿಕ್ಕರ್ ಅಸೋಸಿಯೇಷನ್ ವತಿಯಿಂದ ಮದ್ಯ ಮಾರಾಟಕ್ಕೆ ಬಂದ್‌ಗೆ ಕರೆ ನೀಡಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ರಾಜ್ಯ ಪ್ರವಾಸೋದ್ಯಮ ಹೊಟೇಲ್ ಮಾಲೀಕರ ಸಂಘದಿಂದ ಅಂದು ಮದ್ಯ ಮಾರಾಟ ಮಾಡಲಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದ ಕೌಲಗಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟ ಬಂದ್ ಮಾಡುವ ಬಗ್ಗೆ ಲಿಕ್ಕರ್ ಅಸೋಸಿಯೇಷನ್‌ದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ವೈಯಕ್ತಿಕ ನಿರ್ಧಾರವಾಗಿದೆ. ಈ ಕುರಿತು ಅವರು ಬೇರೆ ಯಾವ ಸಂಘಟನೆಗಳೊಂದಿಗೂ ಚರ್ಚಿಸಿಲ್ಲ. ಬಂದ್ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಟ ಪಡಿಸಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಮೇಲೆ ನಿರಾಧಾರವಾಗಿ ಲಿಕ್ಕರ್ ಅಸೋಸಿಯೇಷನ್‌ದವರು ಆರೋಪ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳೆಲ್ಲವು ಸತ್ಯಕ್ಕೆ ದೂರವಾದವುಗಳು. ಅಬಕಾರಿ ಸಚಿವರ ಮೇಲೆ ಆರೋಪ ಮಾಡುವವರು ಎಲ್ಲಿಂದ ಸೂಟ್‌ಕೇಸ್ ಪಡೆದು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ರಾಜ್ಯ ಪ್ರವಾಸೋದ್ಯಮ ಹೊಟೇಲ್‌ನವರು ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟು, ವಾರ್ಷಿಕ ಲೈಸೆನ್ಸ್ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದೇವೆ. ಈ ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡಿ ಅಬಕಾರಿ ಲಾಭಾಂಶವನ್ನು ಶೇ. ೧೦ ರಿಂದ ಶೇ.೨೦ಕ್ಕೆ ಒದಗಿಸಿಕೊಡಬೇಕು. ಧಾರ್ಮಿಕ, ನೈಸರ್ಗಿಕ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ನಿರಂತರವಾಗಿ ೨೪ ಗಂಟೆ ಕಾಲ ಮದ್ಯ ಪೂರೈಕೆ ಮತ್ತು ಊಟದ ವ್ಯವಸ್ಥೆಗೆ ಅವಕಾಶ ಮಾಡಿಕೊಡಬೇಕು ಜತೆಗೆ ಜಿಎಸ್‌ಟಿ, ತೆರಿಗೆ, ಕೆಇಬಿ, ನೀರಿನ ಕರ ಹಾಗೂ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಲಕ್ಷ÷್ಮಣ ಕೋಟಿ, ಶಂಕರ ಅಲಕನೂರ, ವಿನೋದ ಘೋರ್ಪಡೆ, ಶೇಖರ ಉತ್ತೂರ, ಸೈಯ್ಯದ ಯಡಹಳ್ಳಿ ಇದ್ದರು.