ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ

12..npk-2,
Published on

ನಾಪೋಕ್ಲು: ಇಲ್ಲಿಯ ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಮೂರು ದಿನ ಜರುಗುವ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶಕ್ಕೆ ಶುಕ್ರವಾರ ಮಸೀದಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಲಾಯಿತು.

ಶುಕ್ರವಾರದ ಜುಮುಅ ನಮಾಜ್ ನಂತರ ಜಮಾಯತ್ ಅಧ್ಯಕ್ಷ ಎಂ.ಎಚ್.ಅಬ್ದುಲ್ ರಹಮಾನ್ ಅವರು ಧ್ವಜಾರೋಹಣ ಮಾಡಿ, ಖತೀಬ್ ರದ ಹಾಫಿಳ್ ಶೌಕತಲಿ ಪ್ರಾರ್ಥನೆಯನ್ನು ನೆರವೇರಿಸಿದರು.

ಕೆ.ಎ.ಇಸ್ಮಾಯಿಲ್, ಪಿ.ಎ.ಮನ್ಸೂರ್ ಆಲಿ, ಪಿ.ಎಂ.ಯುನಸ್, ಪಿ.ಎಂ.ಅಬ್ದುಲ್ ಅಜೀಜ್, ಇಸ್ಮಾಯಿಲ್ ಸಖಾಫಿ ಕುಂಡಂಗೇರಿ, ಸಲೀಂ ಹ್ಯಾರಿಸ್, ಶಂಸು ಕಾರೆಕಾಡು , ಪಿ.ಎಂ.ಅರಫತ್, ಹುಸೇನಾರು ತಿರೋವತ್, ಸಿ.ಎಚ್.ಹಮೀದ್, ಜಬ್ಬರ್, ಆಸಿಫ್ ಆಲಿ, ಫಾರೂಕ್, ನೌಫಲ್, ಅಬೂಬಕರ್, ಅಶ್ರಫ್ ಅಲಿ, ಬಜರುದ್ದೀನ್ ಮತ್ತಿತರರು ಮಾತನಾಡಿದರು.

ಮೌಲಿದ್ ಬುರ್ದು, ದಫ್ ಮತ್ತು ಧಾರ್ಮಿಕ ಭಾಷಣ ಸಮಾರಂಭ ಮೀಲಾದ್ ಸಮಿತಿ ಅಧ್ಯಕ್ಷ ಪಿ.ಎಂ.ಅರಫತ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಇಲ್ಲಿಯ ಖತೀಬ್ ಖಲೀಲ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಭಾಷಣವನ್ನು ಖತೀಬ್ ರದ ಹಾಫಿಳ್ ಶೌಕತಲಿ ಸಖಾಫಿ ನೆರವೇರಿಸಿ ದುಅ ಮಜ್ಜೀಸ್ ನೇತೃತ್ವವನ್ನು ಸೈಯದ್ ಶಿಹಾಬುದ್ದೀನ್ ಅಲ್ ಅಹ್ಹಲ್ ಮುತನೂರ್ ತಂಗಳ್ ವಹಿಸಿದ್ದು, ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಭಾನುವಾರ ಸರ್ವ ಧರ್ಮ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net