

ಕಾರವಾರ: ಇಲ್ಲಿನ ಕ್ರಿಮ್್ಸ ಆಸ್ಪತ್ರೆಯಿಂದ ಶನಿವಾರ ಕರೊನಾದಿಂದ 8 ಜನ ಗುಣವಾಗಿದ್ದರೆ ಮತ್ತೆ 9 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.
ತಮಿಳುನಾಡಿನ ಕೊಯಮುತ್ತೂರಿನಿಂದ ವಾಪಸಾಗಿರುವ 14 ವರ್ಷದ ಬಾಲಕನಿಗೆ (ಯುಕೆ-95)ಕರೊನಾ ಇರುವುದು ಜೂನ್ 7 ರಂದು ಖಚಿತವಾಗಿತ್ತು. ಆತನ 45 ವರ್ಷದ ತಂದೆ (ಯುಕೆ-104), 12 ವರ್ಷದ ಸಹೋದರ (ಯುಕೆ-105) ಕರೊನಾ ಆವರಿಸಿರುವುದು ಶನಿವಾರ ದೃಢಪಟ್ಟಿದೆ.
ಜೂನ್ 7 ರಂದು ಮುಂಬೈ ಥಾಣೆಯಿಂದ ದಾಂಡೇಲಿಗೆ ಪಾಲಕರ ಜತೆ ಬಂದ 9 ವರ್ಷದ ಬಾಲಕಿಯಲ್ಲಿ (ಯುಕೆ-102)ರೋಗ ಕಂಡುಬಂದಿದೆ. ಆಕೆ ಹಾಗೂ ಆಕೆಯ ಸಂಪರ್ಕಕ್ಕೆ ಬಂದವರು ಈಗಾಗಲೇ ದಾಂಡೇಲಿ ಆಸ್ಪತ್ರೆಯಲ್ಲಿ ಐಸೋಲೇಶನ್ನಲ್ಲಿ ಇದ್ದಾರೆ.
ಇಷ್ಟೇ ಅಲ್ಲದೆ, ಥಾಣೆಯಿಂದ ವಾಪಸಾಗಿ ಕ್ವಾರಂಟೈನ್ನಲ್ಲಿರುವ ಕಾರವಾರದ 39 ವರ್ಷದ ಪುರುಷ(ಯುಕೆ-107) ಹಾಗೂ 35 ವರ್ಷದ ಮಹಿಳೆ (ಯುಕೆ-108) ರಲ್ಲಿ ಕರೊನಾ ದೃಢಪಟ್ಟಿದೆ. ಥಾಣೆಯಿಂದ ಆಗಮಿಸಿದ ಜೊಯಿಡಾ ಚಾವರ್ಲೆ ಗ್ರಾಮದ 24 ವರ್ಷದ ಮಹಿಳೆ(ಯುಕೆ-101)ಗೆ ರೋಗ ಇರುವುದು ಕಂಡುಬಂದಿದೆ.
ರತ್ನಾಗಿರಿಯಿಂದ ಆಗಮಿಸಿ ಕುಮಟಾದಲ್ಲಿ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ 33 ವರ್ಷದ ವ್ಯಕ್ತಿ (ಯುಕೆ-106) ರೋಗ ಇರುವುದು ಖಚಿತವಾಗಿದೆ. ಅವರ ಸಂಪರ್ಕಕ್ಕೆ ಬಂದ 12 ಜನರನ್ನು ಗುರುತಿಸಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಇನ್ನು ಮಹಾರಾಷ್ಟ್ರದಿಂದ ಆಗಮಿಸಿ ಕುಮಟಾ ಖಾಸಗಿ ಹೋಟೆಲ್ನಲ್ಲಿ ಇದ್ದ 62 ವರ್ಷದ ವೃದ್ಧನಿಗೆ (ಯುಕೆ-109) ರೋಗ ಖಚಿತವಾಗಿದೆ. ಶಿರಸಿಯ ಹುಲೇಕಲ್ಗೆ 6 ಜನರ ಜತೆ ಕಾರಿನಲ್ಲಿ ಮುಂಬೈನಿಂದ ಬಂದ 63 ವರ್ಷದ ವೃದ್ಧೆಯಲ್ಲಿ ರೋಗ ಕಂಡುಬಂದಿದೆ. ಆಕೆಯ ಜತೆಗೆ ಇದ್ದ ಇನ್ನೂ ಐವರ ಗಂಟಲ ದ್ರವದ ಮಾದರಿ ನೆಗೆಟಿವ್ ಬಂದಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 109 ಕ್ಕೆ ತಲುಪಿದೆ. ಅದರಲ್ಲಿ 90 ಕ್ಕೂ ಅಧಿಕ ಜನರು ಗುಣವಾಗಿದ್ದಾರೆ.
ಕುಮಟಾಕ್ಕೆ ಬಂದ ಜಿಂದಾಲ್ ನೌಕರನಿಗೆ ಜ್ವರ: ಜಿಂದಾಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಗುರುವಾರ ರಾತ್ರಿ ಕುಮಟಾಗೆ ಬಂದಿದ್ದಾನೆ. ಆದರೆ ತಾಲೂಕಾಡಳಿತಕ್ಕೆ ಮಾಹಿತಿ ನೀಡಲಿಲ್ಲ. ಈಗ ಜ್ವರ, ಕೆಮ್ಮಿನ ಲಕ್ಷಣದೊಂದಿಗೆ ಆಸ್ಪತ್ರೆ ಸೇರಿಸಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಜಿಂದಾಲ್ನಲ್ಲಿ ಕರೊನಾ ಸಂಕಟ ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಅಳ್ವೇಕೋಡಿಯ ವ್ಯಕ್ತಿ ಯಾರಿಗೂ ಮಾಹಿತಿ ನೀಡದೇ ನೇರ ಮನೆ ಸೇರಿಕೊಂಡಿದ್ದಾರೆ. ಆದರೆ, ಶುಕ್ರವಾರದಿಂದಲೇ ಅವರಿಗೆ ಜ್ವರ, ಕೆಮ್ಮು, ಶ್ವಾಸೋಚ್ಛಾಸ ತೊಂದರೆ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ಪಡೆದ ಕಲಭಾಗ ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷ ನಾಯ್ಕ ಕೂಡಲೆ ತಾಲೂಕಾಡಳಿತಕ್ಕೆ ಮಾಹಿತಿ ನೀಡಿ ವ್ಯಕ್ತಿಯನ್ನು ತಾಲೂಕಾಸ್ಪತ್ರೆಗೆ ಸೇರಿಸಿದ್ದಾರೆ. ಕರೊನಾ ಸೂಕ್ಷ್ಮ ಪ್ರದೇಶಗಳಿಂದ ಬಂದವರು ಕ್ವಾರಂಟೈನ್ ಆಗದೇ, ಆರೋಗ್ಯ ಇಲಾಖೆಗೆ ಅಥವಾ ಸ್ಥಳೀಯ ಆಡಳಿತಕ್ಕೂ ಸರಿಯಾದ ಮಾಹಿತಿ ನೀಡದೇ ಎಡವಟ್ಟು ಮಾಡಿದ್ದಾರೆ. ಶಿಷ್ಟಾಚಾರವನ್ನು ಕಡೆಗಣಿಸಿದ್ದಾರೆ ಎಂದು ಊರವರು ಆರೋಪಿಸಿದ್ದಾರೆ. ಇದು ತಾಲೂಕಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿದೆ. ಜಿಂದಾಲ್ನಿಂದ ಬಂದಿದ್ದ ವ್ಯಕ್ತಿಯ ಗಂಟಲ ದ್ರವ ತಪಾಸಣೆಗೆ ಕಳುಹಿಸಲಾಗಿದೆ.
8 ಜನರ ಬಿಡುಗಡೆ: ಜೂನ್ 5 ರಂದು ಕ್ರಿಮ್್ಸ ಆಸ್ಪತ್ರೆಗೆ ದಾಖಲಾಗಿದ್ದ 8 ಜನರು ಕರೊನಾದಿಂದ ಮುಕ್ತಿ ಪಡೆದಿದ್ದು ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಯಲ್ಲಾಪುರದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು, ಇಬ್ಬರು ಮಕ್ಕಳು ಸೇರಿದ್ದಾರೆ. ವಿದೇಶದಿಂದ ಆಗಮಿಸಿದ ಕಾರವಾರದ 34 ವರ್ಷದ ಪುರುಷ, ಭಟ್ಕಳದ 33 ವರ್ಷದ ಮಹಿಳೆಗೂ ರೋಗ ಇಲ್ಲ ಎಂಬುದು ದೃಢಪಟ್ಟಿದೆ. ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಹಾಗೂ ಕ್ರಿಮ್ಸ್ನ ಎಲ್ಲ ಸಿಬ್ಬಂದಿ ಎಲ್ಲರಿಗೂ ಶುಭ ಹಾರೈಸಿ ಬೀಳ್ಕೊಟ್ಟರು.
ಕ್ವಾರಂಟೈನ್ನಲ್ಲಿ ಇದ್ದವರು ಓಡಾಡಿದರೆ ತಿಳಿಸಿ: ನಗರ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದವರು ಹೊರಗೆ ಓಡಾಡುತ್ತಿರುವುದು ಕಂಡುಬಂದರೆ ಈ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ನಗರಸಭೆ ತಿಳಿಸಿದೆ. ನೋಡಲ್ ಅಧಿಕಾರಿಗಳು: ರವಿ ನಾಯ್ಕ-9902962204, ಮೇಧಾ ಜಿ. ದಾಮೋದ್ಲೇಕರ-9686080806, ಮಹಿಬೂಬ ಲಷ್ಕರಿ-8310518992, ದೀಪಾ ಎಂ. ಶೆಟ್ಟಿ-9148539371, ಪ್ರದೀಪ ಎಸ್. ನಾಯ್ಕ-8310845308, ವೀಣಾ ಆರ್. ಬಾಂದೇಕರ-9449500111, ಪ್ರಭಾಕರ್ ನಾಯ್ಕ-7996531016, ಸಂತೋಷ ಗೊವೇಕರ್-9113085866, ಫಾತೀಮಾ ಎಂ. ದೇಸುರ-9880338386, ಮೇರಿ ಎಸ್. ಡಿಸೋಜಾ-8197489319, ರೇಣುಕಾ ಮುರ್ಡೆಶ್ವರ-8277684456, ಸರಸ್ವತಿ ಕೈಸರೆ-8310065509, ಅನಿತಾ ಎನ್. ಶೆಟ್ಟಿ-9448962118, ನೂತನ ಎನ್. ಶಿರೂರ-8147991033, ಮಲ್ಲಿಕಾರ್ಜುನ್ ಜಿ.ಬಿ.-9902045026, ಗಣೇಶ ಬೈಂದೂರಕರ-8277348499, ಉದಯ ಎಸ್. ನಾಯ್ಕ-9964490760, ಯಾಕುಬ್ ಶೇಖ್-9448596173, ಸರೋಜಾ ಗೌಡರ್- 8884196851, ಅರವಿಂದ ರಾವ್ ಕೆ.-9611099928, ವೀಣಾ ಎಂ.ಎಚ್-9164473213, ನವಿಕಾ ಕೊಡಾರಕರ-7795187460, ಅರುಣ್ ಎನ್. ಮಾಜಾಳಿಕಾರ- 9740880919, ಶಂಕರ್ ಅಡಾರಕರ-9986710040, ನಿತೀನ್ ಶಿಂಧೆ- 8951872575, ಸುರೇಶ್ ಶಿರಾಲಿ-9008057653, ಮಹಾಂತೇಶ್-8495833315, ಪಿ.ಯು. ನಾಯ್ಕ- 9986870507, ಶ್ರೀನಿವಾಸ ಮಿಸ್ಕಿನ್-9663060420