

ಬಾಗಲಕೋಟೆ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಕಾರ್ಯಕ್ರಮ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜರುಗಿತು.
ಅಭಿಯಾನಕ್ಕೆ ಚಾಲನೆ ಕಾಲೇಜಿನ ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ಸದೃಢಗೊಳಿಸಲು ಪ್ರತಿಯೊಬ್ಬ ಯುವಕರು ಮತದಾನ ಮಾಡಿ ಒಳ್ಳೆ ಸರ್ಕಾರವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬಾಗಲಕೋಟೆ ತಹಸೀಲ್ದಾರ ವಿನಯ ಕುಲಕರ್ಣಿ ಕಾಲೇಜಿನ ಎಲ್ಲಾ ಕೋರ್ಸಿನ ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಅವರವರ ಮೊಬೈಲಿನಲ್ಲಿ ವೋಟರ್ ಹೆಲ್ಪ್ ಲೈನ್ ಆಪ್ ಡೌನ್ಲೋಡ್ ಮಾಡಿಸಿ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡುವ ಕುರಿತು ಅರಿವು ಮೂಡಿಸಿದರು. ಅಲ್ಲದೇ ಸ್ಥಳದಲ್ಲಿಯೇ ನೋಂದಣಿ ಕೂಡಾ ಮಾಡಿಸಲಾಯಿತು.
ಆಯೋಜಿಸಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಮತದಾರರ ಘಟಕದ ಸಂಯೋಜಕ ಡಾ.ಸಿ.ಬಿ.ನಂದನ ಸೇರಿದಂತೆ ಇತರರು ಇದ್ದರು.