ಮತದಾರರ ನೋಂದಣಿ ಸರಳೀಕರಣಗೊಳಿಸಿ

suresh sajjan1
Published on

ಕಲಬುರಗಿ: ಈಶಾನ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಚುನಾವಣಾ ಆಯೋಗ ಹಲವು ಬೇಕಿಲ್ಲದ ಷರತ್ತುಗಳನ್ನು ಹಾಕಿದ್ದು ಅವನ್ನು ಸರಳೀಕರಣ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಶಿಕ್ಷಕರ ಹಾಗೂ ಪದವೀಧರರ ಕಲ್ಯಾಣಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶಾನ್ಯ ಪದವೀಧರರ ಕ್ಷೇತ್ರದ ಮತದಾನ ಹೆಸರು ನೋಂದಣಿ ಕಾರ್ಯ ಆರಂಭಿಸಲಾಗಿದೆ. ಅದರಂತೆ ನ.೬ರೊಳಗೆ ಪದವೀಧರರ ತಮ್ಮ ಹೆಸರು ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಕಡಿಮೆ ಸಮಯ ಆಗಲಿದೆ. ಹೆಚ್ಚಿನ ನೋಂದಣಿ ಮಾಡಿಸಲು ಸಾಧ್ಯವಾಗಲ್ಲ ಹೀಗಾಗಿ ದಿನಾಂಕ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪದವೀಧರರ ಹೆಸರು ನೋಂದಾಯಿಸಿಕೊಳ್ಳಲು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಪ್ರತಿ ಚುನಾವಣೆಗೂ ನೋಂದಣಿ ನಿಲ್ಲಿಸಬೇಕು. ಒಂದು ಬಾರಿ ನೋಂದಣಿ ಮಾಡಿದರೆ ಕನಿಷ್ಠ ಮೂರು ಚುನಾವಣೆ ಮತದಾನ ಮಾಡುವ ಅವಕಾಶ ನೀಡಬೇಕು. ಪ್ರತಿ ವರ್ಷ ಜಿಲ್ಲಾವಾರು ಪದವೀಧರರ ಅಂಕಿ ಅಂಶ ದಾಖಲಿಸಿ ನಿರುದ್ಯೋಗಿ ಪದವೀಧರರಿಗೆ ಸ್ವಯಂ ಉದ್ಯೋಗಕ್ಕೆ ನೂತನ ಯೋಜನೆ ರೂಪಿಸಬೇಕು ಎಂದು ಸಜ್ಜನ ಆಗ್ರಹಿಸಿದರು.

ಈ ಸಲ ಹೆಸರು ನೋಂದಣಿಗೆ ಅರ್ಜಿ ಖುದ್ದಾಗಿ ಅಭ್ಯರ್ಥಿಯೇ ನೀಡಬೇಕು ಎಂದು ಸರಿಯಲ್ಲ. ಇಲ್ಲದ ದಾಖಲೆಗಳನ್ನು ಸಂಗ್ರಹಿಸಲು ಕಚೇರಿ ಕಚೇರಿ ಅಲೆಯಲು ಯುವಕರು ಹಿಂದೇಟು ಹಾಕುತ್ತಿದ್ದಾರೆ. ಹಲವು ಅರ್ಜಿಗಳನ್ನು ಒಬ್ಬ ವ್ಯಕ್ತಿ ತಂದಾಗ ಅವುಗಳನ್ನು ಸ್ವೀಕರಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದರು.

ಈ ಸಲ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿz್ದೆÃನೆ. ಬಿಜೆಪಿ ಪಕದ ಟಿಕೆಟ್ ಆಕಾಂಕ್ಷಿಯಾಗಿz್ದÉÃನೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿದ್ದು ಪಾಟೀಲ್, ಸುರೇಶ ಪಾಟೀಲ್ ನೇದಲಗಿ, ಮಡಿವಾಳ ಬಳ್ಳುಂಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net