

ಬಾಗಲಕೋಟೆ: ಮತದಾನದ ಮಹತ್ವವನ್ನು ಯುವ ಸಮುದಾಯ ಅರಿತುಕೊಳ್ಳುವುದರ ಜೊತೆಗೆ ಅದನ್ನು ತಮ್ಮ ಪರಿಸರದ ಉಳಿದವರಿಗೂ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಬೇಕು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ರಾಜ್ಯಶಾಸ್ತç ವಿಭಾಗ ಶನಿವಾರ ಆಯೋಜಿಸಿದ್ದ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನವು ಒಂದು ಕರ್ತವ್ಯವೆಂದು ಭಾವಿಸಿ,ಯಾವುದೇ ಆಶೆ-ಆಮಿಷಗಳಿಗೆ ಒಳಗಾಗದೇ ಅದನ್ನು ಜಾಗೃತಿಯಿಂದ ಮಾಡಬೇಕು. ಯೋಗ್ಯ ಜನಪ್ರತಿನಿಽಗಳನ್ನು ಆರಿಸುವಂತಹ ಈ ಮತದಾನದ ಪ್ರಕ್ರಿಯೆಯಲ್ಲಿ ಯುವಕರು ಉತ್ಸಾಹದಿಂದ ಭಾಗವಹಿಸಬೇಕು ಎಂದರು.
ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ, ಸಶಕ್ತ ನಾಡನ್ನು ಕಟ್ಟುವ ಶಕ್ತಿ ಈ ಮತದಾನಕ್ಕಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಆ ಶಕ್ತಿಯ ಸಮರ್ಪಕ ಬಳಕೆಯನ್ನು ಮಾಡಿಕೊಳ್ಳಬೇಕು. ಮತದಾನದ ಬಗ್ಗೆ ಉದಾಸೀನ ಭಾವ ತಾಳದೇ, ದೇಶದ ಹಿತ ಗಮನದಲ್ಲಿಟ್ಟುಕೊಂಡು ಈ ಕರ್ತವ್ಯವನ್ನು ನಿಭಾಯಿಸಿ ರಾಷ್ಟçದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೈಜೋಡಿಸಬೇಕು ಎಂದರು.
ಉಪನ್ಯಾಸಕರಾದ ಎನ್.ಎಚ್.ಹವಾಲ್ದಾರ, ನಮಿತಾ ನಾಯಕ, ಮೈತ್ರೇಯಿ ಗುಡೂರ, ಎಫ್‌ಡಿಎ ಆರ್.ಎಸ್.ಚವ್ಹಾಣ ಇದ್ದರು. ಉಪನ್ಯಾಸಕಿ ಶ್ವೇತಾ ಕುಲಕರ್ಣಿ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಎಸ್.ಎಸ್. ಹಂಗರಗಿ ಸ್ವಾಗತಿಸಿದರು. ಉಪನ್ಯಾಸಕಿ ಕೀರ್ತಿ ದಾಸರ ಪ್ರತಿಜ್ಞಾವಿಽ ಬೋಽಸಿದರು. ಶ್ರವಣಾ ಸಿದ್ನಾಳ ವಂದಿಸಿದರು. ಸವಿತಾ ಜೇವೂರ ನಿರೂಪಿಸಿದರು.