ಮಠಾಧೀಶರ ಭೇಟಿ ಮಾಡಿದ ಕೈ ಅಭ್ಯರ್ಥಿ

b4c4c91d-94ca-492b-a9d3-ce413b286a7e
Published on

ಬಾಗಲಕೋಟೆ: ಲೋಕ ಸಮರ ಅಖಾಡ ದಿನೇ ದಿನೇ ರಂಗೇರ ತೊಡಗಿದ್ದು, ಕಾಂಗ್ರೆಸ್ ಮತಭೇಟೆ ಶುರು ಮಾಡಿದೆ.

ಮಠಾಧೀಶರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಬಾದಾಮಿ ವಿಧಾನಸಭಾ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದ ಶ್ರೀ ಗುರುಸಿದ್ದೇಶ್ವರ್ ಮಠಕ್ಕೆ ಕಾರ್ಯಕರ್ತರ ಜೊತೆಗೆ ಭೇಟಿ ಕೊಟ್ಟು ಪಡೆದರು.

ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಶ್ರೀನಿವಾಸ್ ಇನಾಣಿ, ರಾಜು ಸಂಗಮ, ಬಾಬು ಬೊಂಬಲೇಕರ ಮತ್ತು ರಾಜು ಜವಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net