ಮಗಳ ನಂತರ ತಂದೆಗೆ ಸೋಂಕು

20DND1
Published on

ಕಾರವಾರ: ಮಹಾರಾಷ್ಟ್ರದ ಸೊಲ್ಲಾಪುರದಿಂದ ಆಗಮಿಸಿದ ಯಲ್ಲಾಪುರ ತಾಲೂಕಿನ ಯುವತಿಗೆ ಮಂಗಳವಾರ ಕರೊನಾ ಸೋಂಕು (ಪಿ-1314) ದೃಢಗೊಂಡಿತ್ತು. ಈಕೆಯ ತಂದೆಗೂ (ಪಿ-1413 ) ಸೋಂಕು ಇರುವುದು ಬುಧವಾರ ಖಚಿತವಾಗಿದೆ.

ಯಲ್ಲಾಪುರ ತಾಲೂಕಿನ ಉಪಳೇಶ್ವರ ಮೂಲದ 46 ವರ್ಷದ ವ್ಯಕ್ತಿ ಇವರಾಗಿದ್ದಾರೆ. ಮೇ 14ರಂದು ಇವರು ತಮ್ಮ ಕುಟುಂಬದ ಜತೆ ಊರಿಗೆ ಮರಳಿ, ನೇರವಾಗಿ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದ್ದರು.

ಉತ್ತರ ಕನ್ನಡ ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 56 ಕ್ಕೆ ತಲುಪಿದ್ದು, ಇದುವರೆಗೂ 12 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 44 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

ಜಿಲ್ಲೆಯ ಅಂಕಿ ಅಂಶ
ಒಟ್ಟು ನಿಗಾದಲ್ಲಿ ಇಲ್ಲಿರುವವರು- 5462
28 ದಿನ ಕ್ವಾರಂಟೈನ್ ಅವಧಿ ಮುಗಿಸಿದವರು- 2218
ಒಟ್ಟು ಗಂಟಲ ದ್ರವದ ಮಾದರಿ ಪರಿಶೀಲನೆ- 3550
ಪ್ರಯೋಗಾಲಯ ವರದಿ ನೆಗೆಟಿವ್ ಬಂದವರು-2827
ಒಟ್ಟು ಐಸೋಲೇಶನ್​ನಲ್ಲಿ ಇದ್ದವರು-110
ಗಂಟಲ ದ್ರವದ ಮಾದರಿ ವರದಿ ಬಾಕಿ-668

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net