

ಕಲಬುರಗಿ: ಶಿಕ್ಷಕರು ಜಗತ್ತಿನ ಹೊಸ ಆವಿಷ್ಕಾರ ಇಂದಿನ ಮಕ್ಕಳಿಗೆ ಬೋಧಿಸಬೇಕು ಎಂದು ನಾಗನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರದ ಡಿವೈಎಸ್ಪಿ ಶರಣಬಸವೇಶ್ವರ ಭಜಂತ್ರಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ತಾಂತ್ರಿಕ ವಿಚಾರಗಳ ಬಗ್ಗೆ ಶಿಕ್ಷಣ ಕೊಡುವ ಅಗತ್ಯವಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜಕ್ಕೆ ಪ್ರತಿಭಾನ್ವಿತರನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ರಾಷ್ಟç, ಅಂತಾರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ಸಾಧಕರ ಹಿಂದೆ ಬೆನ್ನೆಲುಬು ಒಬ್ಬ ಶಿಕ್ಷಕನಾಗಿರುತ್ತಾನೆ. ರೈತ, ಸೈನಿಕ ಹಾಗೂ ಶಿಕ್ಷಕ ನಮ್ಮ ಸಮಾಜದ ಆಧಾರ ಸ್ತಂಭಗಳಾಗಿದ್ದಾರೆ. ಅಂಥಹವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಪರಿಷತ್ತು ಮಾಡುತ್ತಿದೆ. ಜಿಲ್ಲೆಯ ಶಿಕ್ಷಕರು ಪರಿಷತ್ತಿನ ಬೆನ್ನೆಲುಬು ಎಂದರು.
ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ್, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ರಾಜ್ಯ ಸಹ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸೇವಂತಾ ಚವ್ಹಾಣ ಮಾತನಾಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪ್ರತಿನಿಧಿ ಕಲ್ಯಾಣಕುಮಾರ ಶೀಲವಂತ, ಸಹ ಕಾರ್ಯದರ್ಶಿ ರಾಜೇಂದ್ರ ಮಾಡಬೂಳ್, ಪ್ರಮುಖರಾದ ಶಕುಂತಲಾ ಪಾಟೀಲ್ ಜಾವಳಿ, ಶರಣಬಸಪ್ಪ ನರೂಣಿ, ಧರ್ಮಣ್ಣಾ ಧನ್ನಿ, ಬಾಬುರಾವ್ ಪಾಟೀಲ್ ಚಿತ್ತಕೋಟಾ, ಎಸ್.ಕೆ.ಬಿರಾದಾರ್, ಪ್ರಭವ ಪಟ್ಟಣಕರ್, ಜಗನ್ನಾಥ ಯಳಸಂಗಿ, ರವಿಕುಮಾರ ಶಹಾಪುರಕರ್, ರೇವಣಸಿದ್ದಪ್ಪ ಜೀವಣಗಿ, ರಾಜಶೇಖರ ಬೋಳೆವಾಡ, ಬಸ್ವಂತರಾಯ ಕೋಳಕೂರ್, ಮಹಾನಂದಾ ಹುಲಿ ಇತರರು ಇದ್ದರು.