

ಕೊಳ್ಳೇಗಾಲ: ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಅಕ್ಕನ ಬಳಗದ ವತಿಯಿಂದ ವಚನ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಂಗಳೂರಿನ ನಾಟ್ಯ ಸನ್ನಿಧಿ ಭರತನಾಟ್ಯ ಕಲಾ ಶಾಲೆಯ ಸಂಸ್ಥಾಪಕಿ ಮೋನಿಷಾ ನವೀನ್ ಕುಮಾರ್ ಮಾತನಾಡಿ, ಬಸವಾದಿ ಶರಣರು ರಚಿಸಿದ ವಚನಗಳನ್ನು ಪ್ರತಿಯೊಬ್ಬರೂ ಓದಿ ಅವುಗಳ ತತ್ವಗಳನ್ನು ಅನುಸರಿಸಬೇಕಿದೆ. ಸನ್ಮಾರ್ಗದಲ್ಲಿ ನಡೆಯಲು ವಚನಗಳು ಸಹಕಾರಿಯಾಗಲಿದೆ. 12ನೇ ಶತಮಾನದಲ್ಲಿ ಶರಣರಿಂದ ರಚಿಸಲ್ಪಟ್ಟ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಪಾಲಕರು ಮಕ್ಕಳಿಗೆ ವಚನಗಳನ್ನು ಓದಲು ಪ್ರೋತ್ಸಾಹಿಸಬೇಕು ಎಂದರು.
ಈ ವೇಳೆ ನಾಟ್ಯ ಸನ್ನಿಧಿ ಭರತನಾಟ್ಯ ಕಲಾ ಶಾಲೆಯ ವಿದ್ಯಾರ್ಥಿಗಳಾದ ಗಾನವಿ ರಾಜೇಂದ್ರ, ತನಿಷಾ ಸು.ಮೋಹನ ಅವರು ವಚನ ಗಾಯನಕ್ಕೆ ನೃತ್ಯ ಮತ್ತು ಯೋಗ ಪ್ರದರ್ಶನ ನೀಡಿದರು. ಅಕ್ಕನ ಬಳಗದ ಸದಸ್ಯರು ವಚನ ಗಾಯನ ನಡೆಸಿಕೊಟ್ಟರು.
ಸಂಸ್ಕೃತ ಭಾಷೆ ಶಿಕ್ಷಕ ಕುಮಾರ್, ಡಾ.ಸೋಮಪ್ರಭಾ, ಅಕ್ಕನ ಬಳಗದ ಅಧ್ಯಕ್ಷ ಸವಿತಾ ಲೋಕೇಶ್, ಕಾರ್ಯದರ್ಶಿ ಶ್ವೇತಾಸ್ವಾಮಿ, ಸದಸ್ಯರಾದ ಚಂದನ ಪ್ರಕಾಶ್, ಗೀತಾ ಮಂಜುನಾಥ್, ಪ್ರಮೀಳಾ ನಂಜಪ್ಪ, ಜಗದಾಂಬ ಸದಾಶಿವಮೂರ್ತಿ, ಸ್ಮಿತಾ ಸುರೇಶ್, ಪಲ್ಲವಿ ಹರ್ಷ ಮತ್ತಿತರಿದ್ದರು.