ಮಕ್ಕಳಿಗೆ ನೋಟ್‌ಬುಕ್ ವಿತರಣೆ

HUN-JULY-5-5(MACHABAYANAHALLI SCHOOL)
Published on

ಹುಣಸೂರು: ತಾಲೂಕಿನ ಮುಳ್ಳೂರು ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೆ.ಆರ್.ನಗರದ ಪ್ರಭಾ ರೈಸ್ ಮಿಲ್ ಮತ್ತು ಪ್ರಭಾ ಜ್ಯುವೆಲರ್ಸ್‌ ವತಿಯಿಂದ ನೋಟ್‌ಬುಕ್‌ಗಳನ್ನು ಶನಿವಾರ ವಿತರಿಸಲಾಯಿತು.

ಕ್ಲಸ್ಟರ್ ವ್ಯಾಪ್ತಿಯ ಮುಳ್ಳೂರು ಪ್ರೌಢಶಾಲೆ, ಹುಲ್ಯಾಳು, ಲಕ್ಕನಕೊಪ್ಪಲು, ಮಾಚಬಾಯನಹಳ್ಳಿ, ಕಂತೆಗೌಡನ ಕೊಪ್ಪಲು, ಕೃಷ್ಣಾಪುರ, ತೊಂಡಾಳು, ಉಂಡವಾಡಿ, ಹೆಜ್ಜೋಡ್ಲು, ಅತ್ತಿಗುಪ್ಪೆ ಮತ್ತು ಶಿರಿಯೂರು ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳನ್ನು ಪ್ರಭಾ ಸಂಸ್ಥೆ ಮಾಲೀಕರಾದ ದಿ.ಶ್ರೀನಿವಾಸ್ ಅವರ ಸ್ಮರಣಾರ್ಥ ಅವರ ಪುತ್ರರು ವಿತರಿಸಿದರು.

ಮುಳ್ಳೂರು ಶಾಲೆ ಮುಖ್ಯಶಿಕ್ಷಕ ಮೋಹನ್ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಸ್ಥೆಯ ಮಾಲೀಕರು ಕೈಗೊಂಡಿರುವ ಸಾಮಾಜಿಕ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಕರಾದ ಮಹಾಲಕ್ಷ್ಮೀ, ಮೇರಿ ರೀಟಾ, ಪುಟ್ಟರಾಜು, ಶ್ರೀನಿವಾಸ್, ಸ್ವಾಮಿ, ಧ್ರುವಣ್ಣ, ಶೋಭಾ, ಮಂಜುನಾಥ್, ರಂಗಸ್ವಾಮಿ, ದೇವಪ್ಪ, ಹರೀಶ್, ಸಿಆರ್‌ಪಿ ಎ.ಸಿ.ಮಂಜುನಾಥ್, ಬಿಅರ್‌ಪಿ ನಂದೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net