

ಬಾಗಲಕೋಟೆ: ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳಲ್ಲಿ ಮುಖ್ಯವಾಗಿ ಆರೋಗ್ಯ, ಯೋಗ, ಸಂಸ್ಕøತಿ, ಹಾಗೂ ವೇಧ ಅವಶ್ಯವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ನವನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರಥಾ ಇಲಾಖೆ ಹಾಗೂ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರೀಯ ಆಯುಷ ಅಭಿಯಾನದಡಿ ಶಾಲಾ ದೈಹಿಕ ಶಿಕ್ಷಕ, ಶಿಕ್ಷಕಿಯರಿಗೆ ಹಮ್ಮಿಕೊಂಡ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಪೀಳಿಗೆ ಒಳ್ಳೇಯ ನಾಗರಿಕ ಆಗಬೇಕಾದರೆ ಒಳ್ಳೆಯ ಆರೋಗ್ಯ ಮುಖ್ಯವಾಗಿದೆ ಎಂದರು.
ಭಾರತ ದೇಶ ಅನಾಧಿಕಾಲದಿಂದ ಅನೇಕ ವೈದ್ಯಪದ್ದತಿ ಅನುಸರಿಸುತ್ತಾ ಬಂದಿದ್ದು, ಪತಂಚಲಿ, ಚರಕ, ದನವಂತರಿ, ಋಷಿಗಳು ಅನೇಕ ಉಪಯುಕ್ತ ಗೀಡ ಮೂಲಿಕೆಗಳನ್ನು ಬಳಸಿಕೊಂಡು ಮರಣ ಶಯದಲ್ಲಿ ಇರುವಂತಹ ರೋಗಿಗಳನ್ನು ಗುಣಪಡಿಸಿದ್ದಾರೆ. ಈ ಪ್ರಸಂಗ ರಾಮಾಯಣದಲ್ಲಿ ನಡೆದಿದೆ. ಸಂಜೀವನಿ ತರಲು ಆಂಜನೇಯ ಸಂಜೀವಿನಿ ತಂದು ಲಕ್ಷ್ಮಣನನ್ನು ಬದುಕಿಸಿದ ಎಂಬ ಕಥೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇಂದು ಕೂಡಾ ಸಂಜೀವಿನಿ ಪ್ರಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದ ಅಗತ್ಯವಾಗಿದೆ ಎಂದರು.
ವೈದ್ಯ ಪದ್ದತಿಗಳಲ್ಲಿ ಆಯುರ್ವೇದ ಮತ್ತು ಯೋಗ ಪದ್ದತಿ ಶ್ರೇಷ್ಠವಾಗಿದ್ದು, ದೇಶದ ಪ್ರಧಾನಮಂತ್ರಿ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಇದರಿಂದಾಗಿ ಪಾಶ್ಚಿಮಾತ್ಯರು ಸಹ ಭಾರತೀಯ ಸಂಸ್ಕøತಿಯನ್ನು ಅನುಸರಿಸುತ್ತಿರುವದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಇಂತಹ ಪಾರಂಪರಿಕ ಯೋಗವನ್ನು ಮಕ್ಕಳಿಗೆ ಹೇಳಿಕೊಡುವ ನಿಟ್ಟಿನಲ್ಲಿ ದೈಹಿಕ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಂದು ಉತ್ತಮ ಕಾರ್ಯವಾಗಿದೆ. ದೈಹಿಕ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡು ಮಕ್ಕಳಲ್ಲಿ ಯೋಗದ ಮಹತ್ವ ಸಾರುವ ಮೂಲಕ ಮಕ್ಕಳಲ್ಲಿ ದೈಹಿಕ, ಮಾನಸಿಕ, ಆರೋಗ್ಯವಂತರನ್ನಾಗಿ ಮಾಡಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ಯೋಗದ ಮಹತ್ವವನ್ನು ಮಕ್ಕಳಲ್ಲಿ ಅರಿವು ಮೂಡಿಸಿ ಯೋಗ ಕಲಿಸುವ ಮೂಲಕ ಭವಿಷ್ಯದಲ್ಲಿ ಆಯುಷ್ಯವಂತರನ್ನಾಗಿ ಮಾಡಬೇಕು. ಯೋಗ ಮಾಡುವದರಿಂದ ಆಯುಷ್ಯ ಹೆಚ್ಚಾಗುತ್ತದೆ. ಊಟ ಮತ್ತು ಯೋಗದಲ್ಲಿ ಒಳ್ಳೇಯ ಬೆಳವಣಿಗೆ ಮಕ್ಕಳಲ್ಲಿ ಕೊಡಿಸಬೇಕು. ಆಹಾರ ಸೇವನೆ ಮಿತಿಯಲ್ಲಿರಬೇಕು. ಅತಿಯಾದ ಸೇವನೆ ಅಮೃತವೋ ವಿಷವಾಗುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಪ್ರಾಸ್ತಾವಿಕವಾಗಿಕವಾಗಿ ಮಾತನಾಡಿದ ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಅವರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವ ಉದ್ದೇಶದಿಂದ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಆರೋಗ್ಯದ ಬದಲಾವಣೆಗಾಗಿ ಭಯ, ಆತಂಕ ದೂರ ಮಾಡುವ ಶಕ್ತಿ ಯೋಗಕ್ಕಿದೆ. ಮಕ್ಕಳಲ್ಲಿ ದೈಹಿಕ, ಮಾನಸಿಕ ಬೆಳವಣಿಗೆ ಯೋಗ ತರಬೇತಿ ನೀಡುವ ಸಲುವಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಯೋಗದ ಪೋಸ್ಟರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಯೋಗ ತರಬೇತಿದಾರ ಜಯದೇವ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹಿರಿಯ ಆಯುಷ ವೈದ್ಯಾಧಿಕಾರಿ ಡಾ.ರಕ್ಕಸಗಿ ಸ್ವಾಗತಿಸಿದರು. ವೈದ್ಯಾಧಿಕಾರಿ ಎಸ್.ಡಿ.ನಿಡಗುಂದಿ ವಂದಿಸಿದರು. ಡಾ.ದೀಪಾಮಾನ ಪಾಟೀಲ ನಿರೂಪಿಸಿದರು.