

ಬಾಗಲಕೋಟೆ: ಮಕ್ಕಳು ಮಾನಸಿಕವಾಗಿ ಬಳಲುತ್ತಿರುವುದು ಪ್ರಸ್ತುತ ಸಂದರ್ಭದಲ್ಲಿ ಗಮನಹರಿಸಬೇಕಾದ ಬಹುಮುಖ್ಯ ಸಮಸ್ಯೆಯಾಗಿದೆ. ದೇಹದಷ್ಟೇ ಮನಸ್ಸಿನ ಆರೋಗ್ಯ ಕೂಡ ಬಹುಮುಖ್ಯವಾಗಿದೆ ಎಂದು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕಿ ಪ್ರಾಧ್ಯಾಪಕಿ ಮಾಳವಿಕಾ ಕಪೂರ ಅಭಿಪ್ರಾಯಪಟ್ಟರು.
ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯ ನೆಲೆಯಲ್ಲಿ ಮಕ್ಕಳಲ್ಲಿ ಉದಾತ್ತ ಗುಣಗಳನ್ನು ಬೆಳೆಸಬೇಕಾಗಿದೆ. ಮಕ್ಕಳ ಮಾನಸಿಕ ಆರೋಗ್ಯದಲ್ಲಿ ಮೌಲ್ಯಗಳ ಅಗತ್ಯ ಬಹಳಷ್ಟಿದೆ ಎಂದರು.
ಅಟೆಶ್ನನ್ ಡಿಫಿಸಿಟ್ ಹೈಪರ್ಯಾಕ್ಟಿವಿಟಿ ಡಿಸಾರ್ಡರ್ (ಎ.ಡಿ.ಎಚ್.ಡಿ) ಎನ್ನುವುದು ಮಕ್ಕಳ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಮಾನ್ಯ ಮಾನಸಿಕ ಅಸ್ವಸ್ಥತೆಯಾಗಿದೆ. ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮಕ್ಕಳ ಸಾಮಾಜಿಕ ಬದುಕಿನಲ್ಲಿ ವೈಪರಿತ್ಯಗಳು ತಲೆದೂರುತ್ತವೆ. ಭವಿಷ್ಯದ ಆರೋಗ್ಯವಂತ ನಾಗರಿಕರನ್ನು ರೂಪಿಸುವ ದಿಸೆಯಲ್ಲಿ ಎ.ಡಿ.ಎಚ್.ಡಿ ಅಂತಹ ಕಾಯಿಲೆ ಗುರುತಿಸಿ ಗುಣಪಡಿಸುವ ಜವಾಬ್ದಾರಿ ಮಾನಸಿಕ ತಜ್ಞರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ಮಾಳವಿಕಾ ಕಪೂರ ಅವರ ಮಲ್ಟಿಲಿಂಗ್ವಲಿಸA ಇನ್ ಚಿಲ್ಡçನ್ ಆ್ಯಂಡ್ ಎ ಮಾರ್ವೆಲ್, ಎ ಮಿರಾಕಲ್, ಅಂಡ್ ಯೆಟ್ ಎ ಮಿಸ್ಟರಿ ಹೆಸರಿನ ಹೊಸ ಪುಸ್ತಕ ಬಿಡುಗಡೆಗೊಳಿಸಲಾಯಿತು. ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷಕ ಡಾ.ಶರೀರಾಮ ಕೋರಾ ಇತರರು ಇದ್ದರು. ಡಾ.ನಾರಾಯಣ ಮುತಾಲಿಕ ಸ್ವಾಗತಿಸಿದರು. ಡಾ.ಸುಷ್ಮಾ ಇನಾಮದಾರ್ ಪರಿಚಯಿಸಿದರು. ಡಾ.ಹರೀಶ್ ಕುಲಕರ್ಣಿ ವಂದಿಸಿದರು.