

ಕಲಬುರಗಿ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯಿಂದ ಶುಕ್ರವಾರದಿಂದ ಏ.೩೦ರವರೆಗೆ ಮಾಕಾ ಲೇಔಟ್ನಲ್ಲಿ ೮೯೨ನೇ ಬಸವ ಜಯಂತಿ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯ ಅಯ್ಯಣ್ಣ ನಂದಿ ಹೇಳಿದರು. ಏ.೨೬ರಿಂದ ೩೦ರವರೆಗೆ ನಿತ್ಯ ಸಂಜೆ ಮಹಾಲಿಂಗ ಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದೆ. ಶುಕ್ರವಾರ ಸಂಜೆ ೪.೩೦ಕ್ಕೆ ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ರ‍್ಧೆಗಳು ಜರುಗಲಿವೆ. ಏ.೨೬ರಂದು ಸಂಜೆ ೬ಕ್ಕೆ ಪ್ರವಚನ ಉದ್ಘಾಟನೆ ನಡೆಯಲಿದೆ. ಬಸವರಾಜ ಧನ್ನೂರ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಏ.೨೭ರಿಂದ ೨೯ರವರೆಗೆ ನಿತ್ಯ ಸಂಜೆ ೬.೪೫ಕ್ಕೆ ಷಟಸ್ಥಲ ಧ್ವಜಾರೋಹಣ ನಡೆಯಲಿದೆ. ಏ.೩೦ರಂದು ಬೆಳಗ್ಗೆ ೮ಕ್ಕೆ ಬಡಾವಣೆಯ ಶರಣೆಯರಿಂದ ಬಸವ ತೊಟ್ಟಿಲು ಕರ‍್ಯಕ್ರಮ, ೯ರಿಂದ ರಕ್ತದಾನ ಶಿಬಿರ, ಸಂಜೆ ೬.೩೦ಕ್ಕೆ ಸಮಾರೋಪ ನಡೆಯಲಿದೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಾ.ಬಾಬುರಾವ ಶೇರಿಕಾರ, ಪರಮೇಶ್ವರ ಶೆಟಗಾರ, ಡಾ.ಸಂಜೀವಕುಮಾರ ಶೆಟಗಾರ, ಆದಪ್ಪ ಬಗಲಿ, ಹಣಮಂತರಾಯ ಐನೂಲಿ, ಮಹಾಂತೇಶ ಕಣ್ಣೂರ, ಸರ‍್ಯಕಾಂತ, ಸಿದ್ದರಾಮ ವಾಲಿ, ಶಿವಕುಮಾರ, ಸುಭಾಶ್ಚಂದ್ರ, ವಿರೇಶ, ಸತೀಶ ಸಜ್ಜನ್ ಇದ್ದರು.