

ಬೆಟ್ಟದಪುರ: ಸಮೀಪದ ಹಾರನಹಳ್ಳಿ ಗ್ರಾಮದ ನಾಡಕಚೇರಿಯಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಶನಿವಾರ ಜರುಗಿತು.
ವಿಧವಾ, ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ, ವೃದ್ಧಾಪ್ಯ ವೇತನ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಲಾಯಿತು. ಉಪತಹಸೀಲ್ದಾರ್ ಆರ್.ಮಹೇಶ್, ಗ್ರಾಮ ಆಡಳಿತಾಧಿಕಾರಿಗಳಾದ ನವೀನ್ ರಾವ್, ಪ್ರದೀಪ್ ಗಡೇಕರ್, ಧನಂಜಯ್ ನಾಯಕ್, ರಾಜೇಶ್, ಎಂ.ವಿ.ಭಾಗ್ಯಲಕ್ಷ್ಮೀ, ಪೀರಣ್ಣ, ದುರಗೇಶ್, ನಾಗರಾಜು, ಹರ್ಷಿತ್ ಇತರರು ಇದ್ದರು.