

ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿ ಮಹಿಳೆಯೊಬ್ಬರು ಗಟಾಯಿಸಿ ಪಾಕೆಟ್‌ನಲ್ಲಿಟ್ಟದ ಮಂಗಳಸೂತ್ರವನ್ನು ಕಳ್ಳತನ ಮಾಡಿದ ಘಟನೆ ಸೋಮವಾರ ನಡೆದಿದೆ. ಬ್ರಹ್ಮಪುರದ ತವರು ಮನೆಗೆ ಆಗಮಿಸಿದ ಬೆಂಗಳೂರಿನ ಪ್ರಜ್ಞಾ ಜಾಧವ್ ಸರ ಕಳೆದುಕೊಂಡವರು. ಬಂಗಾರದ ಗುಂಡುಗಳುಳ್ಳ ಮಂಗಳಸೂತ್ರವನ್ನು ಸೂಪರ್ ಮಾರ್ಕೆಟ್‌ನಲ್ಲಿ ಗಟಾಯಿಸಿಕೊಂಡು ಪಾಕೆಟ್‌ನಲ್ಲಿಟ್ಟು ವಿವಿಧ ಖರೀದಿಯಲ್ಲಿ ತೊಡಗಿದ್ದಾರೆ. ಈ ವೇಳೆ ಪಾಕೆಟ್‌ನಲ್ಲಿದ್ದ ೩೦ ಸಾವಿರ ರೂ. ಮೌಲ್ಯದ ಮಂಗಳಸೂತ್ರ, ಎರಡು ಸಾವಿರ ರೂ. ನಗರದು, ಎರಡು ಎಟಿಎಂ ಕಾರ್ಡ್ ಕಳ್ಳತನ ಮಾಡಲಾಗಿದೆ ಎಂದು ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.