ಮ.ಬೆಟ್ಟಕ್ಕೆ ತೆರಳಲು ಪರದಾಡಿದ ಭಕ್ತರು

25 HANUR 3
Published on

ಹನೂರು: ತಾಲೂಕಿನ ಮಲ್ಲಯ್ಯನಪುರದ ಬಳಿ ಬುಧವಾರ ಸಾರಿಗೆ ಬಸ್ ಕೆಟ್ಟು ನಿಂತ ಪರಿಣಾಮ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರು ಕೆಲಕಾಲ ತೊಂದರೆ ಅನುಭವಿಸಿದರು. ಮಧ್ಯಾಹ್ನ 12.45ರಲ್ಲಿ ಬೆಂಗಳೂರಿನಿಂದ ಮ.ಬೆಟ್ಟಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದರು. ಮಾರ್ಗಮಧ್ಯೆ ಮಲ್ಲಯ್ಯನಪುರದ ಬಳಿ ಬಸ್ ಕೆಟ್ಟು ನಿಂತಿತು. ಕೆಲಕಾಲ ರಸ್ತೆ ಬದಿಯಲ್ಲೇ ಜನರು ಮತ್ತೊಂದು ಬಸ್‌ಗೆ ಕಾದು ನಿಲ್ಲುವಂತಾಯಿತು. ಬಳಿಕ ಆಗಮಿಸಿದ ಸಾರಿಗೆ ಬಸ್‌ನಲ್ಲಿ ಕೆಲವರು ನಿಂತುಕೊಂಡೇ ಮ.ಬೆಟ್ಟಕ್ಕೆ ತೆರಳಿದರೆ, ಇನ್ನು ಕೆಲವರು ಖಾಸಗಿ ಬಸ್‌ನಲ್ಲಿ ಹಣ ನೀಡಿ ಪ್ರಯಾಣಿಸಿದರು. ಸಾರಿಗೆ ಅವ್ಯವಸ್ಥೆ ಬಗ್ಗೆ ಭಕ್ತರಿಂದ ಆಕ್ಷೇಪ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net