ಭ್ರಷ್ಟಾಚಾರಕ್ಕೆ ಬಿ.ಆರ್.ಪಾಟೀಲ್ ಆಶ್ರಯ

Harshanand Guttedar
Published on

ಕಲಬುರಗಿ: ಆಳಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪಡಿತರ ಧಾನ್ಯ ಅಕ್ರಮ ಸಾಗಣೆ, ನರೇಗಾದಲ್ಲಿ ಹಣ ಲೂಟಿ, ನಮ್ಮ ಹೊಲ ನಮ್ಮ ರಸ್ತೆ, ಪಿಡಬ್ಲೂಡಿ ಇಲಾಖೆ ಕಾಮಗಾರಿಗಳಲ್ಲಿ ಅಕ್ರಮ, ದ್ವೇಷದ ರಾಜಕಾರಣ ಮಾಡಿ, ಇಡೀ ಕ್ಷೇತ್ರದಲ್ಲಿ ಶಾಸಕ ಬಿ.ಆರ್.ಪಾಟೀಲ್ ಆಶ್ರಯದಲ್ಲೇ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಆರೋಪಿಸಿದರು.
ಆಳಂದ ಪಟ್ಟಣದಲ್ಲಿ ಇತ್ತೀಚೆಗೆ ಅಕ್ರಮ ಪಡಿತರ ಧಾನ್ಯ, ಮಕ್ಕಳಿಗೆ ನೀಡಬೇಕಾದ ಹಾಲಿನ ಫೌಡರ್‌ನ್ನು ಅಕ್ರಮವಾಗಿ ಸಂಗ್ರಹಿಸಿದ ಅಡ್ಡೆ ಮೇಲೆ ದಾಳಿ ಮಾಡಿ, ಮಾಹಿತಿ ನೀಡಿz್ದೆÃವು. ಆದರೆ ಶಾಸಕರ ಬೆಂಬಲಿಗ ಸ್ಥಳಕ್ಕೆ ಬಂದು ಒತ್ತಡ ಹೇರಿದ್ದರಿಂದ ದೂರು ದಾಖಲಿಸಿಕೊಳ್ಳಲಿಲ್ಲ. ಕೊನೇ ಡಿಸಿ ಗಮನಕ್ಕೆ ತಂದ ನಂತರ ದೂರು ದಾಖಲಿಸಿಕೊಳ್ಳಲಾಯಿತು. ಡಿಸಿಯೇ ಬರುವಂತ ಸ್ಥಿತಿ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಕ್ರಮ ಬಯಲಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಸಂಬAಧವೇ ಇರದ ಲಾರಿ ಚಾಲಕನನ್ನು ಶಾಸಕರ ಬೆಂಬಲಿಗರು ಬೆದರಿಸಿ, ನನ್ನ ಹೆಸರು ಹೇಳುವಂತೆ ಹಲ್ಲೆ ಮಾಡಿದ್ದರು. ಈ ಬಗ್ಗೆ ಲಾರಿ ಚಾಲಕ ಹಲ್ಲೆ ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಕೂಡಲೇ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಬಿ.ಆರ್.ಪಾಟೀಲ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಸಂಬAಧಿಕ ಸರ್ಕಾರಿ ಅಧಿಕಾರಿಗಳು, ಕೆಕೆಆರ್‌ಟಿಸಿ ಕಂಡಕ್ಟರ್, ಚಾಲಕರನ್ನು ದೂರದ ಬಳ್ಳಾರಿಗೆ ವರ್ಗಾವಣೆ ಮಾಡಿ, ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ನ್ಯಾಯಾಲಯದಿಂದ ಗಡಿಪಾರಾದ ಫಿರ್ಧೋಶ್ ಅನ್ಸಾರಿಯ ಪುರಸಭೆ ಸದಸ್ಯತ್ವ ರದ್ದು ಮಾಡುತ್ತಿಲ್ಲ. ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಸ್ಪಂದಿಸುತ್ತಿಲ್ಲ. ಈತನನ್ನು ಬಳಸಿ ಶಾಸಕರು ಅಕ್ರಮ ಚಟುವಟಿಕೆ ಮಾಡುತ್ತಿದ್ದಾರೆ ಎಂದರು.
ಬಿ.ಆರ್.ಪಾಟೀಲ್‌ರನ್ನು ಜನ ಆಯ್ಕೆ ಮಾಡಿರುವುದು ಅವರಿಗೆ ಮರೆತ್ತಿದೆ. ಕೆ.ಎಂ.ಎಫ್. ಅಧ್ಯಕ್ಷ ಆರ್.ಕೆ.ಪಾಟೀಲ್ ಬಳಿಯೇ ಎಲ್ಲ ಕೆಲಸಕ್ಕೆ ಹೋಗುವಂತಾಗಿದೆ. ಶಾಸಕರು ಜನರೊಂದಿಗೆ ಸಿಟ್ಟಿನಿಂದಲೇ ಮಾತನಾಡುತ್ತಿದ್ದಾರೆ. ಭೂಸನೂರ ಸಕ್ಕರೆ ಕಾರ್ಖಾನೆಯ ಸಿಎಸ್‌ಆರ್ ಫಂಡ್‌ನ ಕೆಲಸಗಳಲ್ಲೂ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಆಳಂದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಹಣಮಂತರಾಯ ಮಲಾಜಿ, ಸಂತೋಷ ಹಾದಿಮನಿ, ಬಾಬುರಾವ ಸರಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net