

ಬಾಗಲಕೋಟೆ: ಈಗ ತರಾತುರಿ ಟೆಂಡರ್ ಕರೆದಿದ್ದಾರೆ. ಕಾಮಗಾರಿ ವೆಚ್ಚವನ್ನು ನೂರು ರೂಪಾಯಿ ಇದ್ದಿದ್ದನ್ನು ಇನ್ನೂರು ರೂ.ಗೆ ಹೆಚ್ಚಿಸಿದ್ದಾರೆ. ನೂರು ರೂ. ಹೆಚ್ಚಿಗೆ ಮಾಡಿದ್ದು ಲಂಚಕ್ಕಾಗಿ. ಚುನಾವಣೆಗೆ ಒಂದು ತಿಂಗಳು ಇರುವಾಗ ಟೆಂಡರ್ ಮಾಡ್ತಾರಾ? ಎಲ್ಲವನ್ನು ರದ್ದು ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಮುಂದೆ ನಾವು ಅಽಕಾರಕ್ಕೆ ಬಂದ ಮೇಲೆ ತನಿಖೆ ಮಾಡಿಸುತ್ತೇವೆ. ಎಲ್ಲರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಇದಕ್ಕಾಗಿ ಪ್ರತ್ಯೇಕ ಆಯೋಗ ರಚನೆ ಮಾಡುತ್ತೇವೆ ಎಂದರು.
ಹಣೆಗೆ ತುಪ್ಪ ಹಚ್ಚುತ್ತಿದೆ
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಬಿಜೆಪಿಯವರು ದೊಡ್ಡದಾಗಿ ಹೇಳುತ್ತಾರೆ. ಆದರೆ, ಕೇಂದ್ರ ಸಚಿವ ನಾರಾಯಣಸ್ವಾಮಿ ಈ ಬಗ್ಗೆ ನಮಗೆ ಯಾವುದೇ ಪ್ರಸ್ತಾವನೆ ಕಳಿಸಿಲ್ಲ ಅಂದಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಮೂಗಿಗೆ ಅಲ್ಲ, ಹಣೆಗೆ ತುಪ್ಪ ಹಚ್ಚುತ್ತಿದೆ ಎಂದು ಸಿದ್ದರಾಮಯ್ಯ ಜರಿದರು.
ಬಾದಾಮಿ ಜನರ ಉಪಕಾರ ಮರೆಯಲ್ಲ:
ಮತ್ತೆ ಬಾದಾಮಿಯಿಂದ ಸ್ಪಽðಸುವಂತೆ ಜನರು ಹೇಳುತ್ತಿದ್ದಾರೆ. ಅಲ್ಲಿನ ಜನ ಬಹಳ ಒಳ್ಳೆಯವರು. ನನಗೆ ದೂರ ಆಗುತ್ತೆ. ಜನರ ಋಣ ತೀರಿಸಬೇಕಾಗಿದೆ. ಬಾದಾಮಿಯಲ್ಲಿ ಸ್ಪರ್ಧೆ ಕಷ್ಟ ಆಗುತ್ತದೆ. ಅದನ್ನು ಜನರಿಗೆ ಹೇಳಿದ್ದೇನೆ. ರಾಜಕೀಯ ಜೀವನದಲ್ಲಿ ಬಾದಾಮಿ ಜನರ ಉಪಕಾರ ಮರೆಯುವುದಿಲ್ಲ ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಈವರೆಗೆ ಶೇ.೯೯ ದಾಳಿ ವಿಪಕ್ಷಗಳ ಮೇಲೆ
ಬಿಬಿಸಿ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಯಾರ ಮಾತಾಡುತ್ತಾರೋ ಅವರ ಮೇಲೆ ದಾಳಿ ಮಾಡುತ್ತಾರೆ. ಐಟಿ, ಇಡಿ, ಸಿಬಿಐ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈವರೆಗೂ ಆಗಿರುವ ದಾಳಿಗಳ ಪೈಕಿ ಶೇ.೯೯ರಷ್ಟು ವಿಪಕ್ಷಗಳ ಮೇಲೆ ಎಂದು ಹರಿಹಾಯ್ದರು.