ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಖಂಡನೆ

16 hkr 03
Published on

ಹಿರೇಕೆರೂರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘದಿಂದ ಮಂಗಳವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಹಣವಂತರು ರೈತರ ಭೂಮಿ ಖರೀದಿಸಲು ಅವಕಾಶ ನೀಡುತ್ತದೆ. ಕೂಡಲೆ ರೈತ ವಿರೋಧಿ ನೀತಿ ಕೈಬಿಡಬೇಕು. 2016-17ನೇ ಸಾಲಿನ ಹಿಂಗಾರು ಬೆಳೆ ವಿಮೆ ಹಣ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಕಿಸಾನ್ ಸಮ್ಮಾನ್ ಯೋಜನೆ ತಾರತಮ್ಯ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ರಿಯಾಜುದ್ದಿನ್ ಬಾಗವಾನ್ ಮನವಿ ಸ್ವೀಕರಿಸಿದರು. ಸಂಘದ ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಶಂಕ್ರಗೌಡ ಮಕ್ಕಳ್ಳಿ, ಎಸ್.ವಿ. ಚಪ್ಪರದಳ್ಳಿ, ಮಹ್ಮದಗೌಸ್ ಪಾಟೀಲ, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ, ಪರಮೇಶಗೌಡ ಪಾಟೀಲ, ಶಿವನಗೌಡ ಪಾಟೀಲ, ಮಲ್ಲನಗೌಡ ಮಾಳಗಿ, ಮಲ್ಲೇಶಪ್ಪ ದೊಡ್ಡಉಪ್ಪಾರ, ಚಾಮರಾಜ ಬಣಕಾರ, ಮರಿಗೌಡ ಪಾಟೀಲ, ಸಣ್ಣಗೌಡ ಚಿಕ್ಕಣಜಿ, ವಿವಿಧ ಗ್ರಾಮಗಳ ರೈತರು ಇದ್ದರು.

ರಾಣೆಬೆನ್ನೂರಲ್ಲಿ ರೈತರಿಂದ ವಿರೋಧ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ರೈತ ಸಂಘದ ತಾಲೂಕು ಘಟಕದಿಂದ ನಗರದ ಮಿನಿ ವಿಧಾನಸೌಧ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ತಾಲೂಕಾಧ್ಯಕ್ಷ ಕರಬಸಪ್ಪ ಅಗಸಿಬಾಗಿಲ ಮಾತನಾಡಿ, ಸರ್ಕಾರ ಭೂ-ಸುಧಾರಣೆ ಕಾಯ್ದೆಗೆ ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಬಸನಗೌಡ ಕೋಟೂರು ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಶಂಕ್ರಪ್ಪ ಮೆಣಸಿನಹಾಳ, ಸುರೇಶ ದೂಳೆಹೊಳಿ, ಬಸವಂತಪ್ಪ ಅಜ್ಜನವರ, ಮಲ್ಲಪ್ಪಗೌಡ ಇಟಗಿ, ನಾಗಪ್ಪ ಯಲಿಗಾರ, ಸುರೇಶ ಮೈದೂರು, ಸಿದ್ದಪ್ಪ ನಿಟ್ಟೂರು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net