

ಶಿರಸಿ: ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರು ಶಾಲ್ಮಲಾ ನದಿ ತಟದ ಭೀಮನಪಾದಕ್ಕೆ ತೆರಳಿ ಬಿಲ್ವಪತ್ರೆ ಅರ್ಚನೆ ಮೂಲಕ ಶಿವಪೂಜೆ ನೆರವೇರಿಸಿದರು.
ಮಠದಿಂದ ಭೀಮನಪಾದಕ್ಕೆ ತೆರಳಿ ಸತ್ಯನಾರಾಯಣ ವ್ರತದಲ್ಲಿ ಪಾಲ್ಗೊಂಡ ಶ್ರೀಗಳು ಲಿಂಗಕ್ಕೆ ಜಲಾಭಿಷೇಕ ಮಾಡುವ ಜತೆ, ಬಿಲ್ವಪತ್ರೆ ಮೂಲಕ ಪೂಜೆ ನೆರವೇರಿಸಿದರು. ಮಠದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಶತರುದ್ರ, ಲಘುರುದ್ರ ಹವನ, ಗಂಗಾವಿಶ್ವೇಶ್ವರ ಹಾಗೂ ಚಂದ್ರಮೌಳೇಶ್ವರ ದೇವರಿಗೆ ಶತರುದ್ರ ಪೂರ್ವಕ ಮಹಾಪೂಜೆ ನೆರವೇರಿಸಿದರು. ಧಾರ್ವಿುಕ ಕಾರ್ಯಕ್ರಮದಲ್ಲಿ ಆರ್.ಎನ್. ಹೆಗಡೆ ಉಳ್ಳಿಕೊಪ್ಪ ದಂಪತಿ ಯಜಮಾನರಾಗಿ ಪಾಲ್ಗೊಂಡಿದ್ದರು.