ಭಾಷೆ ಸಾಮರಸ್ಯದ ನೆಲೆಯಾಗಲಿ

bkt-6-4
ಬಾಗಲಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಪ್ತ ಭಾಷೆಗಳ ಸಪ್ತಾಹಿಕ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿ ಉಡುಗಡೆ ತೊಟ್ಟು ಸಂಭ್ರಮಿಸಿದರು.
Published on

ಬಾಗಲಕೋಟೆ: ಭಾಷೆ ಗಡಿನಾಡಗಳಲ್ಲಿ ಬದುಕಿನ ಪ್ರಶ್ನೆಯಾಗಿದ್ದು, ಭಾಷೆ ಸಾಮರಷ್ಯದ ನೆಲೆಯಾಗಬೇಕು ಎಂದು ಧಾರವಾಡದ ಸಂಶೋಧಕ ಡಾ.ಬಾಲಕೃಷ್ಣ ಬೇಂದ್ರೆ ಹೇಳಿದರು.

ಅಂತರ ರಾಷ್ಟ್ರೀಯ ಮಾತೃಭಾಷೆ ದಿನ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಪ್ತ ಭಾಷೆಗಳ ಸಪ್ತಾಹಿಕ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ಪ್ರಾಂತ್ಯಗಳು ಭಾಷಾವಾರು ವಿಭಜನೆಯಾಗಿ, ಮತ್ತೆ ಒಂದುಗೂಡಿದಾಗ ಭಿನ್ನ ವಿಭಿನ್ನ ಸಂಸ್ಕೃತಿ, ಹಲವು ಭಾಷಿಕರ ಸಂವಹನದಲ್ಲಿ ಮತ್ತು ಬದುಕಿನ ಅನಿವಾರ್ಯತೆಗಳಲ್ಲಿ ಮಿಶ್ರಣಗೊಂಡಿದ್ದು, ಅದರಲ್ಲೂ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ದ್ವೀಭಾಷಿಕನಾಗಿರುವುದು ಅನಿವಾರ್ಯವಾದ ಸಂಗತಿಯಾಗಿದೆ. ಇದು ಭಾರತೀಯ ವೈವಿಧ್ಯತೆಯ ಸಂಸ್ಕೃತಿಯಲ್ಲಿ ತನ್ನದೆ ಪಾತ್ರವನ್ನು ವಹಿಸಿಕೊಂಡಿದೆ. ಹೀಗಾಗಿ ಪ್ರತಿಯೊಬ್ಬ ಮಾತೃಭಾಷಿಕನಿಗೂ ತನ್ನ ಭಾಷೆಯ ಬಗ್ಗೆ ಪ್ರೀತಿ ವಾತ್ಸಲ್ಯ ಸಹಜವಾದದು. ಆದರೆ ಅದು ಇನ್ನೊಬ್ಬ ಭಾಷಿಕನಿಗೆ ಸಂಘರ್ಷದ ನೆಲೆಯಾಗಬಾರದು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಸಂಗಮೇಶ ಬ್ಯಾಳಿ ಮಾತನಾಡಿ, ಸತತ ೭ ದಿನಗಳ ಈ ಸಪ್ತ ಭಾಷೆಗಳ ಸಪ್ತಾಹಿಕ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈ ಸಪ್ತಾಹ ಮೂಲಕ ಗೊತ್ತಿರದ ಹಲವೂ ಭಾಷೆಗಳ ಪರಿಚಯ ಜ್ಞಾನ ವಿದ್ಯಾರ್ಥಿಗಳಿಗೆ ಲಭಿಸಿದೆ. ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿನಿಯರು ತಮ್ಮ ಕುಟುಂಬದ ಅನಕ್ಷರಸ್ಥ ಸದಸ್ಯರನ್ನು ದತ್ತು ತೆಗೆದುಕೊಂಡು ಕನ್ನಡ ಕಲಿಸು ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.
ಪ್ರಾಚಾರ್ಯ ಎಸ್.ಎನ್.ಪಟ್ಟಣಶೆಟ್ಟಿ ಮಾತನಾಡಿ, ವಿವಿಧ ಭಾಷೆಯ ಸಾಹಿತ್ಯ ಸಂಸ್ಕೃತಿ ಮತ್ತು ಸಂಪ್ರದಾಯ ಬಗ್ಗೆ ೭ ದಿನಗಳ ಕಾಲ ಮಕ್ಕಳಿಗೆ ಉಪನ್ಯಾಸ ನಿಡಿಸಿ, ಭಾಷಿಕ ಸಾಮರಸ್ಯತೆಯನ್ನು ವಿದ್ಯಾರ್ಥಿಗಳ ಮನ ತುಂಬಿಸಿದ ಕನ್ನಡ ವಿಭಾಗದ ಕಾರ್ಯ ಮೆಚ್ಚುಗೆ ಪಡೆದುಕೊಂಡಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಹಲವು ಭಾಷೆಗಳ ಜ್ಞಾನ ಅವಶ್ಯ ಎಂದರು.

ಕಾರ್ಯಕ್ರಮದಲ್ಲಿ ಡಾ.ಬಿ.ಎಮ್.ಬಡಿಗೇರ, ಸುನೀಲ ನಡಕಟ್ಟಿ, ಜಗದೀಶ ಪತಂಗೆ, ಸಂಗಮೇಶ ಬ್ಯಾಳಿ, ಬಸವರಾಜ ನಾಯಕ್, ಡಾ.ನಂದಾ ಇಟ್ಕರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net