ಭಾಷೆ ಆತ್ಮ, ಭಾವನಾತ್ಮಕ ಬದುಕಿನ ಉಸಿರು

bkt-23-7
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಇಂಜನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಂಬಾಣಿ ಭಾಷಾ ಸಂರಕ್ಷಣೆ ಮತ್ತು ತಾಂತ್ರಿಕ ಅಭಿವೃದ್ಧಿ ಎರಡು ದಿನದ ರಾಷ್ಟ್ರೀಯ ಕಾರ್ಯಾಗಾರ
Published on

ಬಾಗಲಕೋಟೆ: ಲಂಬಾಣಿ ಭಾಷೆಗೆ ಬಹುತಿಕ ಸ್ವರೂಪ ಕೋಡುವ ಪ್ರಯತ್ನ ಇದಾಗಿದ್ದು, ಭಾಷೆಯೂ ಆತ್ಮದ ಹಾಗೂ ಭಾವನಾತ್ಮಕ ಬದುಕಿನ ಉಸಿರಾಗಿದೆ. ಭಾಷೆ ಬರೀ ಸಂವನಾತ್ಮಕ ಅನುವಾದ ಸೀಮಿತಗೊಳ್ಳದೆ ಸಾಕಷ್ಟು ಸಾಂಸ್ಕೃತಿಕ ಭಾವನಾತ್ಮಕ ಅನುವಾದದ ಕ್ರಿಯಾ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಧಾರವಾಡದ ಇಂಡಿಯನ ಇನ್ಸೂಟ್ಯೂಟ್ ಆಪ್ ಟೇಕ್ನಾಲೋಜಿ ಡೀನ ಎಸ್.ಆರ್.ಮಹದೇವ ಪ್ರಸನ್ನ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಇಂಜನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಬಿವಿವಿ ಸಂಘದ ಪಾಲಿಟೆಕ್ನಿಕ್ ಕಾಲೇಜು, ಧಾರವಾಡದ ಇಂಡಿಯನ ಇನ್ಸೂಟ್ಯೂಟ್ ಆಫ ಟೇಕ್ನಾಲೋಜಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಂಬಾಣಿ ಭಾಷಾ ಸಂರಕ್ಷಣೆ ಮತ್ತು ತಾಂತ್ರಿಕ ಅಭಿವೃದ್ಧಿ ಎರಡು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರತ ಸರ್ಕಾರ ಭಾಷಿಣಿ ಅನ್ನುವಂತ ಒಂದು ಯೋಜನೆಯನ್ನು ರೂಪಿಸಿದ್ದು, ಈ ಯೋಜನೆ ಭಾಷಾಂತರಕ್ಕೆ ಸಹಾಯವಾಗುವಂಥದ್ದು, ಒಂದು ಭಾರತೀಯ ಭಾಷೆಯಿಂದ ಇನ್ನೊಂದು ಭಾರತೀಯ ಭಾಷೆಗೆ ಸಾಮಾನ್ಯ ಮನುಷ್ಯನು ಕೂಡ ಭಾಷಾಂತರ ಮಾಡಲಿಕ್ಕೆ ಅನುಕೂಲ ಒಂದು ತಾಂತ್ರಿಕ ಅಭಿವೃದ್ಧಿ ಆಗಿದೆ. ಇದರಲ್ಲಿ ಬಹುತೇಕ ನಮ್ಮ ಐಐಟಿ ಸಂಸ್ಥೆಗಳು ಸೇವೆಯನ್ನು ಸಲ್ಲಿಸುತ್ತಿವೆ ಎಂದರು.

ಭಾಷೆ ಸಂರಕ್ಷಣೆಗೆ ತಾಂತ್ರಿಕತೆ ಸಹಾಯಕವಾಗಬೇಕಾಗಿದೆ. ಒಂದು ಭಾಷೆಗೆ ಯಾವುದೇ ರೀತಿ ಯೋಜನೆ ರೂಪಿಸುವಾಗ ದತ್ತಾಂಶಗಳ ಸಂಗ್ರಹ ಕೆಲವು ಪ್ರದೇಶಕ್ಕೆ ಮತ್ತು ಕೆಲವು ವ್ಯಕ್ತಿಗಳಿಗೆ ಸೀಮಿತವಾಗದೆ. ಆ ಭಾಷೆ ಕೇವಲ ಭಿನ್ನ-ವಿಭಿನ್ನ ವ್ಯಕ್ತಿಗಳಿಂದ ಮತ್ತು ಭಿನ್ನ-ಭಿನ್ನ ಪ್ರದೇಶಗಳ ದತ್ತಾಂಶಗಳ ಪರಿಗಣಿಸಬೇಕು. ಹೀಗಾಗಿ ಲಂಬಾಣಿ ಬರೀ ಕರ್ನಾಟಕದಲ್ಲಿ ಅಷ್ಟೇ ಅಲ್ಲ ದೇಶ ವ್ಯಾಪಿ ತನ್ನ ಸಮುದಾಯವನ್ನ ಹಂಚಿಕೊಂಡಿದ್ದು ಲಂಬಾಣಿ ಭಾಷೆ ಅಧ್ಯಾಯನಿಸಲು ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಹೊಂದಲು ಸಂಸ್ಕೃತ, ಗುಜರಾತಿ, ಮರಾಠಿ, ಹಿಂದಿ ಹೀಗೆ ಹಲವಾರು ಭಾಷೆಯ ಅಧ್ಯಯನದ ಅವಶ್ಯಕತೆ ಇದೆ ಎಂದರು.

ಧಾರವಾಡದ ಇಂಡಿಯನ್ ಇನ್ಸೂಟಯೂಟ್ ಆ-ï ಇನ್ಪಾರಮೇಷನ್ ಟೆಕ್ನಾಲೋಜಿ ಡಾ.ದೀಪಕ ಕೆ.ಟಿ ಮಾತನಾಡಿ ತಂತ್ರಜ್ಞಾನ ಬಳಕೆ ಲಂಬಾಣಿ ಭಾಷೆ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕೆ ಅದರದೆಯಾದ ಸಿದ್ಧತೆ ಅಗತ್ಯವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ನರೇಂದ್ರಜಿ ಮಾತನಾಡಿ, ಮುಂದಿನ ೧೦೦ ವರ್ಷದ ನಂತರದ ಪಿಳೆಗೆಗೆ ಬಂಜಾರ ಸಮುದಾಯ ಕೊಡುಗೆ ತಿಳಿಯಲು, ತಮ್ಮ ಭಾಷಾ ಶ್ರೀಮಂತಿಕೆ, ಸಮೃದ್ಧಿ, ತಮ್ಮ ಪೂರ್ವಜರ ಈ ದೇಶವನ್ನು ನೊಡಿದಂತ ರೀತಿ ತಿಳಿಯಲು ತಾಂತ್ರಿಕವಾಗಿ ಲಂಬಾಣಿ ಭಾಷೆ ಮುನ್ನುಡಿ ಬರಯಬೇಕಿದೆ. ಬಂಜಾರ ಸಮುದಾಯ ಇಟಲಿ, ರೋಮ್ ನಗರಗಳಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಬಂದಿತ್ತು. ಈಡಿ ಜಗತ್ತನ್ನು ಜೋಡಿಸಿದಂತಹ ಸಮುದಾಯವಿದು. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಲಂಬಾಣಿ ಭಾಷಾ ಸಂರಕ್ಷಣೆ ಮತ್ತು ತಾಂತ್ರಿಕ ಅಭಿವೃದ್ಧಿ ನೆರವಾಗಲಿದೆ ಎಂದು ಹೇಳಿದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಡಿಜಿಟಲ್ ಕಾಲವಿದು. ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಸಾಕಷ್ಟು ಬೇಳವಣಿಗೆ ಕಂಡಿದೆ. ಸಣ್ಣ ಸಣ್ಣ ವ್ಯಾಪಾರಸ್ಥರು ಡಿಜಿಟಲ್ ಬಳಕೆ ಮಾಡುತ್ತಿದ್ದಾರೆ. ಭಾರತವು ದೊಡ್ಡ ಕ್ರಾಂತಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಂಜಾರ ಸಮುದಾಯ ಭಾಷೆ ಸಂಸ್ಕೃತ, ಮರಾಠಿ, ಗುಜರಾತಿ, ಹಿಂದಿ ಭಾಷೆ ರೂಪಿಸಿಕೊಂಡಿದೆ. ಅಂತ ಭಾಷಿಕ ಸಂರಕ್ಷಣೆಗೆ ತಾಂತ್ರಿಕ ಅಭಿವೃದ್ಧಿ ಅವಶ್ಯವಾಗಿದೆ ಎಂದು ತಿಳಿಸಿದರು.

ಶಂಕರಲಿಂಗ ಗುರುಪೀಠ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಬಂಜಾರ ಅಕಾಡೆಮಿ ಅಧ್ಯಕ್ಷ ಹಿರಾಲಾಲ್ ಚವ್ಹಾಣ,ಡಿ.ಕೆ.ಖಂಡೋಬ, ಬಿವಿವಿ ಸಂಘದ ತಾಂತ್ರಿಕ ಕಾಲೇಜುಗಳ ಮುಖ್ಯಸ್ಥ ಡಾ.ಆರ್.ಎನ್.ಹೆರಕಲ್ಲ, ಪಾಲಿಟೆಕ್ನೀಕ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ ಉಪಸ್ಥಿತರಿದ್ದರು. ಸುನೀಲ ರಾಥೋಡ ಪ್ರಾಸ್ತವಾಕವಾಗಿ ಮಾತನಾಡಿದರು. ಎಂ.ಎಸ್.ಮಾಟೂರ ವಂದಿಸಿದರು. ಎಲ್.ಜಿ.ವೈದ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net