ಭಾಷಣದಿಂದ ಹೊಟ್ಟೆ ತುಂಬಲ್ಲ

bkt-4-7
ಬಾಗಲಕೋಟೆ ನಗರದ ಮಂಗಳವಾರ ರಾತ್ರಿ ನಗರದಲ್ಲಿ ಮರಾಠ ಹಿತಚಿಂತಕ ಸಂಘದ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಸನ್ಮಾನಿಸಲಾಯಿತು. ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಇದ್ದರು.
Published on

ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಏಕತೆ ಐಕ್ಯತೆಗಾಗಿ ಹೋರಾಟ ಮಾಡಿದ್ದಾರೆ. ಅವರ ಹೆಸರಿನಲ್ಲಿ ಭಾಷಣ ಮಾಡುವುದರಿಂದ ಯಾರ ಹೊಟ್ಟೆಯು ತುಂಬುವುದಿಲ್ಲ. ಸಮಸ್ತ ಮರಾಠ ಸಮಾಜ ಇತಿಹಾಸ ಪ್ರಜ್ಞೆ ಅರಿತು ಮುನ್ನಡೆಯಬೇಕು. ಶಿಕ್ಷಣ, ರಾಜಕೀಯ, ಸಾಮಾಜಿಕ ನ್ಯಾಯದ ಪರ ಚಿಂತನೆ ನಡೆಸಬೇಕು. ಯುವಕರು ಶಿಕ್ಷಣಕ್ಕೆ ಅತೀ ಹೆಚ್ಚು ಒತ್ತು ನೀಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಮರಾಠ ಹಿತಚಿಂತಕ ಸಂಘದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬರೀ ಬಾಯಿ ಮಾತಿಗೆ ವಕಾಲತ್ತು ವಹಿಸುವರನ್ನು ನಂಬಬೇಡಿ. ಪುತ್ಥಳಿ ಸ್ಥಾಪನೆ ಯಿಂದ ಮಾತ್ರಕ್ಕೆ ಸಮಾಜ ಏಳಿಗೆ ಆಗುವುದಿಲ್ಲ. ಮೂರ್ತಿ ನಮ್ಮೆಲ್ಲರ ಪ್ರೇರಣಾ ಶಕ್ತಿಯಾಗಿರುತ್ತದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂರ್ತಿ ಸ್ಥಾಪನೆ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.

ಜಮ್ಮುಕಾಶ್ಮೀರದಿಂದ ಕನ್ಯಾ ಕುಮಾರಿವರೆಗೂ ಹಿಂದು ರಾಷ್ಟ್ರ. ಹಿಂದುತ್ವದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ನಮ್ಮ ಸಮಾಜದ ಮಕ್ಕಳಿಗೆ ಜ್ಞಾನ, ವಿದ್ಯೆ ಬಗ್ಗೆ ಯಾರು ಮಾತನಾಡುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಕೇವಲ ಮುಸ್ಲಿಂ ವಿರೋಧಿ ಅಲ್ಲ. ದೇಶದ ಏಕತೆಗೆ ಯಾರೇ ವಿರೋಧ ಮಾಡಿದರು ಹೋರಾಟ ಮಾಡುತ್ತಿದ್ದರು. ಅಂದು ಬ್ರಿಟಿಷರ್, ಮೊಗಲರು ಯಾರೇ ಇದ್ದರು ದೇಶದ ವಿಷಯದಲ್ಲಿ ರಾಜಿ ಆಗುತ್ತಿರಲಿಲ್ಲ. ಈ ನೈಜ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿರುವುದು ಖೇದಕರ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net