ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಮೌಲ್ಯ

sri matruvarga
ಶೃಂಗೇರಿಯ ಶ್ರೀ ವಿಶ್ವಕರ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಾತೃವರ್ಗ ಕಾರ್ಯಕ್ರಮವನ್ನು ಹಿರಿಯ ಸದಸ್ಯೆ ಕುಸುಮಾ ಉದ್ಘಾಟಿಸಿದರು. ಪುರೋಹಿತರಾದ ಪ್ರಕಾಶ್, ವಿಠಲ್, ರಾಘವೇಂದ್ರ ಆಚಾರ್ಯ,ಪ್ರೇಮಾಕೃಷ್ಣಚಾರ್ ಇದ್ದರು.
Published on

ಶೃಂಗೇರಿ: ಭಾರತೀಯ ಸಂಸ್ಕೃತಿ ಸರ್ವರಿಗೂ ಉನ್ನತವಾದ ಮೌಲ್ಯ ನೀಡಿದೆ. ಮಾನವನ ಉನ್ನತಿಗೆ ಅರ್ಥಪೂರ್ಣವಾದ ಸಂದೇಶ ನೀಡಿರುವ ನಮ್ಮ ಪರಂಪರೆಯನ್ನು ಗೌರವಿಸಿ ಅಲ್ಲಿರುವ ವಿಚಾರಗಳನ್ನು ಆಚರಣೆಗೆ ತರುವ ಅಗತ್ಯವಿದೆ ಎಂದು ಋತ್ವಿಜರಾದ ವೇಲಾಪುರಿ ಶ್ರೀ ವಿಶ್ವನಾಥ ಶರ್ಮ ತಿಳಿಸಿದರು.

ಅವರು ಭಾನುವಾರ ಶ್ರೀ ವಿಶ್ವಕರ್ಮ ಸೇವಾ ಸಮಿತಿ, ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಹಾಗೂ ವೇದಭಾರತೀಸಂಪ್ರತೀಷ್ಠಾನಮ್ ಆಶ್ರಯದಲ್ಲಿ ರಾಜನಗರದ ಶ್ರೀ ವಿಶ್ವಕರ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಾತೃವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯರು ನಡೆಸಿಕೊಂಡು ಬಂದ ಸಾಂಪ್ರಾದಾಯಿಕ ಪದ್ಧತಿಗಳು ಜೀವನದ ಪರಿಪೂರ್ಣತೆಗೆ ಪೂರಕವಾಗಿದೆ. ಪ್ರತಿನಿತ್ಯ ಭಗವಂತನ ಪೂಜೆ, ಹಬ್ಬಹರಿದಿನಗಳು, ಪಾರಂಪರಿಕ ನಂಬಿಕೆಗಳ ಮೌಲ್ಯಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಗ ಮಾತ್ರ ಜೀವನ ಸಾರ್ಥಕ್ಯವಾಗಲು ಸಾಧ್ಯ ಎಂದರು.
ಉದ್ಘಾಟನೆಯನ್ನು ಹಿರಿಯ ಸದಸ್ಯೆ ಕುಸುಮಾ ನೆರವೇರಿಸಿದರು. ಶ್ರೀ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಾ ಕೃಷ್ಣಚಾರ್, ಸೇವಾಸಮಿತಿ ಪದಾಧಿಕಾರಿಗಳಾದ ವೆಂಕಟೇಶ್ ಆಚಾರ‌್ಯ, ಸುರೇಂದ್ರ ಆಚಾರ್ಯ, ಪುರೋಹಿತರಾದ ಜಗದೀಶ್ ಶರ್ಮ, ಚೇತನ್, ಗಣೇಶ್, ಪುರಂದರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net