ಭಾರತೀಯ ಗುರು ಪರಂಪರೆ ಜಗತ್ತಿಗೆ ಶ್ರೇಷ್ಠ

bkt-10-2
ಬಾಗಲಕೋಟೆ ನಗರದ ಬಿವಿವಿ ಸಂಘದ ಶಾಲಾ ಆವರಣದಲ್ಲಿ ಗುರುವಾರ ಮೋಟಗಿ ಬಸವೇಶ್ವರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ವಿತರಿಸಿದರು.
Published on

ಬಾಗಲಕೋಟೆ:ವಿಶ್ವಗುರುವಾಗಿದ್ದ ಭಾರತದ ಗುರುಪರಂಪರೆ ಜಗತ್ತಿಗೆ ಶ್ರೇಷ್ಠವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಶಾಲಾ ಆವರಣದಲ್ಲಿ ಗುರುವಾರ ಮೋಟಗಿ ಬಸವೇಶ್ವರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಗುರು ಶಿಷ್ಯ ಪರಂಪರೆಯು ಪ್ರಾಚೀನ ಕಾಲದಿಮದಲೂ ಭಾರತದಲ್ಲಿ ಅಸ್ತಿತ್ವದಲ್ಲಿದೆ. ಗುರು ಜ್ಞಾನದ ಮೂಲವಾಗಿದ್ದು, ಶಿಷ್ಯನಿಗೆ ಮಾರ್ಗದರ್ಶನ ನೀಡುತ್ತಾನೆ. ಗುರುವು ಕೇವಲ ವಿದ್ಯೆ ಮಾತ್ರವಲ್ಲದೆ ಜೀವನದ ಮೌಲ್ಯಗಳು ಮತ್ತು ನೈತಿಕಕತೆ ಸಹ ಕಲಿಸುತ್ತಾನೆ. ಭಾರತೀಯ ಗುರು-ಶಿಷ್ಯ ಪರಂಪರೆ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈ ಪರಂಪರೆಯು ಜ್ಞಾನ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಹಾನಗಲ್ ಕುಮಾರೇಶ್ವರ ಔಷಧ ಹಾಗೂ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪದ ನಿಮಿತ್ತ ಕಾರ್ಯದರ್ಶಿ ಕೆ.ಎಚ್.ಹೊಸುರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net