ಭಾರತೀ ಉತ್ಸವದಲ್ಲಿ ಸಾವಿರಾರು ಜನ ಭಾಗಿ

16KMD-2
Published on

ಕೆ.ಎಂ.ದೊಡ್ಡಿ: ಭಾರತೀ ಉತ್ಸವ ಮಂಡ್ಯ ಜಿಲ್ಲೆಯಲ್ಲೆ ತನ್ನದೇ ಆದ ಚಾಪು ಮೂಡಿಸುತ್ತ ಸಾಂಸ್ಕೃತಿಕ ಉತ್ಸವವಾಗಿ ಬಿಂಬಿತವಾಗಿದೆ ಎಂದು ವಿಧಾನ ಪರಿಪತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆಯ ಚೇರ‌್ಮನ್ ಮಧು ಜಿ.ಮಾದೇಗೌಡ ಹೇಳಿದರು.

ಭಾರತೀ ಕಾಲೇಜಿನಲ್ಲಿ ಆಯೋಜಿಸಿದ್ದ ಭಾರತೀ-ವಾಕಥಾನ್ ಕಾಲ್ನಡಿಗೆ ಭಾರತೀ ಉತ್ಸವದೆಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀ ಉತ್ಸವದ ಸಾಂಸ್ಕೃತಿಕ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಕೌಶಲ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಾಂಸ್ಕೃತಿಕ ವೇದಿಕೆ ಸಿದ್ಧಪಡಿಸಲಾಗಿದ್ದು ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿಯಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ಜಿಲ್ಲೆಯ ಸೊಬಗನ್ನು ಮತ್ತಷ್ಟು ಪ್ರಜ್ವಲಗೊಳಿಸಲು ಭಾರತೀ ಉತ್ಸವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಜನತೆ ಸೊಬಗನ್ನು ಸವಿಯಿರಿ. ಭಾರತೀ ಸಂಸ್ಥೆಯು ಅಖಂಡ ಭಾರತದ ವೈಶಿಷ್ಟ್ಯತೆಯನ್ನು ತೊಡಗಿಸಿಕೊಂಡಿದ್ದು ವೈವಿಧ್ಯತೆಯಲ್ಲಿ ಏಕತೆ ಇದೆ. ನಮ್ಮ ಸಂಸ್ಕೃತಿ ವಿಭಿನ್ನವಾದರೂ ಎಲ್ಲರೂ ಒಟ್ಟಾಗಿ ಭಾರತಿ ಉತ್ಸವವನ್ನು ಸಂಭ್ರಮಿಸೋಣ ಎಂದು ತಿಳಿಸಿದರು.

ಭಾರತೀ ವಿದ್ಯಾ ಸಂಸ್ಥೆಯ ಭಾರತೀ ಉತ್ಸವ ಅಂಗವಾಗಿ ವಿವಿಧ ಅಂಗ ಸಂಸ್ಥೆ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದಿಂದ ಮದ್ದೂರಿನ ಕ್ರೀಡಾಂಗಣದಿಂದ ಆರಂಭವಾದ ವಾಕಥಾನ್ ಟಿ.ಬಿ. ಸರ್ಕಲ್ ವೃತ್ತದ ಮಾರ್ಗವಾಗಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಮಾರ್ಗವಾಗಿ ಮರಕಾಡುದೊಡ್ಡಿ, ಉಪ್ಪಿನಕೆರೆ ಗೇಟ್, ಬೋರಾಪುರ, ಛತ್ರದ ಹೊಸಹಳ್ಳಿ, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ ಗೇಟ್, ದೇವರಗಳ್ಳಿ ಗೇಟ್ ಮಾರ್ಗವಾಗಿ ಭಾರತೀ ಕ್ಯಾಂಪಸ್‌ವರೆಗೆ ಜರುಗಿತು. ಸುಮಾರು 3 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂ ಸೇವಕರು, ಅಂಗ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಪಾಲ್ಗೊಂಡಿದ್ದವರಿಗೆ ಪ್ರಮಾಣ ಪತ್ರ ನೀಡಲಾಯಿತು.

ಭಾರತೀ ವಿದ್ಯಾಸಂಸ್ಥೆಯ ಸಿಇಒ ಆಶಯ್ ಜಿ.ಮಧು, ವಿವಿಧ ಅಂಗ ಸಂಸ್ಥೆ ಮುಖ್ಯಸ್ಥ ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರೊ. ಎಸ್.ನಾಗರಾಜ್, ಡಾ.ತಮಿಜ್ ಮಣಿ, ಡಾ.ಬಿ.ಆರ್.ಚಂದನ್, ಡಾ.ಎಸ್.ಎಲ್.ಸುರೇಶ್, ಜಿ.ಕೃಷ್ಣ, ಪುಟ್ಟಸ್ವಾಮಿ, ಜಿ.ಬಿ.ಪಲ್ಲವಿ, ಸಿ.ವಿ.ಮಲ್ಲಿಕಾರ್ಜುನ, ಆಡಳಿತ ಅಧಿಕಾರಿ ಜವರೇಗೌಡ, ಶೋಭಾ, ಸುನೀಲ್‌ಕುಮಾರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net