ಭಾರತದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಬಿಳಲಿ

1508 AFZ 01
Published on

ಅಫಜಲಪುರ: ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟçವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಬೇಕಿದೆ ಎಂದು ಶಾಸಕ ಎಂ.ವೈ.ಪಾಟೀಲï ತಿಳಿಸಿದರು.

ತಹಸಿಲ್ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರೊತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಆರ್ಥಿಕ, ಶೈಕ್ಷಣಿಕ ಸೇರಿ ಹಲವಾರು ರಂಗಗಳಲ್ಲಿ ಅಭಿವೃದ್ಧಿ ಆಗಬೇಕಾಗಿದೆ. ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದ್ದು, ಯುವ ಸಮೂಹ ಪರಿಣಾಮಕಾರಿ ಶಿಕ್ಷಣದೊಂದಿಗೆ ದೇಶ ಸೇವೆಗೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ತಹಸೀಲ್ದಾರ್ ಸಂಜೀವಕುಮಾರ ದಾಸರ, ತಾಪಂ ಇಒ ರಮೇಶ ಸೂಲ್ಪಿ, ಸಿಪಿಐ ಪಂಡಿತ ಸಗರ, ಅಧಿಕಾರಿಗಳಾದ ಎಸ್.ಎಚ್.ಗಡಗಿಮನಿ, ಶಾಂತಪ್ಪ ಜಾಧವ್, ವಿಜಯ ಮಹಾಂತೇಶ ಹೂಗಾರ, ಪ್ರಮುಖರಾದ ಪ್ರಕಾಶ ಜಮಾದಾರ, ಮತೀನ್ ಪಟೇಲï, ಸಿದ್ಧಾರ್ಥ ಬಸರಿಗಿಡದ, ಪಪ್ಪು ಪಟೇಲï, ರಮೇಶ ಪೂಜಾರಿ, ಚಂದು ಕರಜಗಿ, ಶ್ರೀಮಂತ ಬಿರಾದಾರ, ಸಿದ್ದುಗೌಡ ಪಾಟೀಲ್, ಭೀಮರಾವ ಗೌರ, ಮಹಾಂತೇಶ ಬಡದಾಳ, ರಾಜು ಆರೇಕರ, ಮಹಾಂತೇಶ ಬಳೂಂಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net