ಭಾರತ ದೇಶದ ಸೈನಿಕ ಶಕ್ತಿ ಅತ್ಯಂತ ಬಲಿಷ್ಠ

fed69785-c6c1-484e-b1e5-7caf4b7d32df
ಬಾಗಲಕೋಟೆ ನವನಗರದ ಎಂಆರ್‌ಎನ್ ಆಯುರ್ವೇದಿಕ್ ಕಾಲೇಜಿನಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಹಾಗೂ ರಾಷ್ಟç ಧರ್ಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಬ್ರಿಗೇಡಿಯರ್ ಸುಽÃಂದ್ರ ಇಟ್ನಾಳ್ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮುರುಗೇಶ್ ನಿರಾಣಿ ಮತ್ತಿತರರು ಇದ್ದರು.
Published on

ಬಾಗಲಕೋಟೆ : ಭಾರತ ದೇಶದ ಸೈನಿಕ ವ್ಯವಸ್ಥೆ ಅತ್ಯಂತ ಬಲಿಷ್ಠ, ಸಮಗ್ರ ಮತ್ತು ಜಾತ್ಯಾತೀತತೆಯಿಂದ ಕೂಡಿದೆ. ರಾಷ್ಟç ಧರ್ಮವೇ ಸೈನಿಕರ ಧರ್ಮವಾಗಿದೆ ಎಂದು ನಿವೃತ್ತ ಬ್ರಿಗೇಡಿಯರ್ ಸುಽÃಂದ್ರ ಇಟ್ನಾಳ್ ಹೇಳಿದರು.

ನವನಗರದ ಎಂ.ಆರ್.ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆ ಮತ್ತು ರಾಷ್ಟç ಧರ್ಮ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸದೃಢ ದೇಹದಲ್ಲಿ ಆರೋಗ್ಯಪೂರ್ಣ ಮನಸ್ಸಿರುತ್ತದೆ. ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ವಿಜ್ಞಾನ ತಂತ್ರಜ್ಞಾನ ಬಹಳಷ್ಟು ಬೆಳದಿದೆ. ಮೂಢನಂಬಿಕೆ, ಕಂದಾಚಾರಗಳಿAದ ದೂರ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಸರಿಯಾದ ಕ್ರಮವನ್ನು ಅರಿತುಕೊಳ್ಳಬೇಕು. ಒಳ್ಳೆಯ ಆಹಾರ ಮತ್ತು ಸಿಸ್ತು ಬದ್ಧ ಜೀವನ ಕ್ರಮ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪಡೆದ ಜಾನಪದ ಕಲಾವಿದ ಕೃಷ್ಣ ಪೂಜಾರಿ, ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಪ್ರಾಚಾರ್ಯ ಪ್ರಹ್ಲಾದ ಗಂಗಾವತಿ, ಇಂಜಿನಿಯರ್ ಭರತ್ ಈಟಿ, ಶಿವಕುಮಾರ ಗಂಗಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net