

ಬಾಗಲಕೋಟೆ: ಯಾತ್ರೆ ಪರಿಕಲ್ಪನೆ ಹುಟ್ಟು ಹಾಕಿದ್ದು ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ. ಇಂತಹ ನೂರಾರು ಯಾತ್ರೆ ಬಿಜೆಪಿ ಮಾಡಿದೆ. ಹಿಂದುಸ್ತಾನ-ಪಾಕಿಸ್ತಾನ ಅಂತ ದೇಶ ವಿಭಜನೆ ಮಾಡಿದ ಕಾಂಗ್ರೆಸ್‌ನಿಂದ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ. ಜೋಡೋ ಪದ ಬಳಕೆಗೆ ಕಾಂಗ್ರೆಸ್‌ಗೆ ಅಧಿಕಾರವಿಲ್ಲ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಯಾತ್ರೆಗೆ ಜನ ಬರುತ್ತಿಲ್ಲ. ಕಾಂಗ್ರೆಸ್‌ನವರು ಕರೆದುಕೊಂಡು ಬರುತ್ತಿದ್ದಾರೆ. ನೆಹರು ಪ್ರಧಾನಿಯಾಗವು ಆಸೆಗೆ ದೇಶ ವಿಭಜನೆ ಮಾಡಲಾಯಿತು. ಪಾಕನಲ್ಲಿ ಇದ್ದ ಶೇ.೨೩ ಹಿಂದು ಸಂಖ್ಯೆ ಇಂದು ಶೇ.೨ ಕ್ಕೆ ಇಳಿದಿದೆ. ಭಾರತಾಂಬೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದು ಕಾಂಗ್ರೆಸ್. ಇದೀಗ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಸ್ಥಿತಿಯಲ್ಲಿದೆ. ಜೋಡು ಯಾತ್ರೆ ಮೂಲಕ ಕಾಂಗ್ರೆಸ್ ಭಾರತೀಯರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಜನ ಮೂರ್ಖರಾಗುವ ಸ್ಥಿತಿಯಲ್ಲಿ ಇಲ್ಲ. ಭಾರತ ಜೋಡೋ ಅಲ್ಲ. ಕಾಂಗ್ರೆಸ್ ಜೋಡು ಅಂತ ಹೇಳಬೇಕಿತ್ತು ಎಂದು ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಲೇವಡಿ ಮಾಡಿದರು.
ಸಚಿವಸ್ಥಾನಕ್ಕಾಗಿ ಬಿಜೆಪಿಯಲ್ಲಿ ಇಲ್ಲ. ಕೇಂದ್ರದ ನಾಯಕರು ಯಾವಾಗ ಸಚಿವರಾಗಿ ಅಂತ ಹೇಳುತ್ತಾರೆ ಆವಾಗ ಆಗೆ ಆಗುತ್ತೇನೆ. ಸಿದ್ದರಾಮಯ್ಯ ಓರ್ವ ಅಯೋಗ್ಯ. ಎಲ್ಲ ಪಕ್ಷ ಮುಗಿಸಿದ್ದಾರೆ. ಅವರನ್ನು ನಂಬಿದ್ದ ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ ಕೈ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವದ ನಾಯಕ. ಅವರ ಬಗ್ಗೆ ಹಗುರುವಾಗಿ ಮಾತನಾಡಬೇಡಿ. ಸಿದ್ದರಾಮಯ್ಯ ಮಾತನಾಡಿದಕ್ಕೆ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ. ಸಿದ್ದರಾಮಯ್ಯಗೆ ಆತ್ಮಸ್ಥೆರ್ಯವಿಲ್ಲ. ಮುಸ್ಲಿಂರು, ತಮ್ಮ ಜಾತಿ ಜನ ಎಲ್ಲಿ ಇರುತ್ತಾರೆ ಅಲ್ಲಿ ಹಣ ಹಂಚಿ ಗೆಲ್ಲಬೇಕು ಅಂತ ಯೋಚನೆ ಮಾಡಿ ಕ್ಷೇತ್ರಗಳ ಆಯ್ಕೆ ಮಾಡುತ್ತಾರೆ. ನಿಜವಾಗಿ ಅಭಿವೃದ್ಧಿ ಪರ ಇದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಸವಾಲ್ ಹಾಕಿದರು.
ತಬ್ಬಿಬ್ಬಾದ ಈಶ್ವರಪ್ಪ..
ಅವನ್ಯಾರೋ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜ್ಯದಲ್ಲಿ ಶೇ.೪೦ ಪರ್ಸೆಂಟ್ ಕಮಿಷನ್ ಇದೇ ಅಂತ ಆರೋಪ ಮಾಡಿದ್ದಾನೆ. ದಾಖಲೆ ಇಲ್ಲ. ದಾಖಲೆ ಇದ್ದರೇ ಕೊಡಬೇಕಿತ್ತು ಅಂತ ಹೇಳಿದರು. ಈ ವೇಳೆ ಹಾಗಿದ್ದರೇ ಎಷ್ಟು ಪರ್ಸೆಟ್ ನಡೆಯುತ್ತಿದೆ ಅಂತ ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಕೆ.ಎಸ್.ಈಶ್ವರಪ್ಪ ತಬ್ಬಿಬ್ಬಾದರು. ಉತ್ತರಿಸಲಾಗದೇ ಪತ್ರಕರ್ತರ ಮೇಲೆ ಗರಂ ಆದರು. ನಂತರ ಪ್ರಧಾನ ನರೇಂದ್ರ ಮೋದಿ ಸಿದ್ದರಾಮಯ್ಯ ಸರ್ಕಾರದ ಮೇಲೆ ೧೦ ಪರ್ಸೆಂಟ್ ಆರೋಪ ಮಾಡಿದ್ದಾಗ ದಾಖಲೆ ಇತ್ತಾ ಅಂತ ಪರ್ತಕರ್ತರು ಮರು ಪ್ರಶ್ನಿಸಿದರು. ನಾನು ಆರೋಪ ಮಾಡಿರಲಿಲ್ಲ. ಮೋದಿ ಮಾಡಿದ್ದಾರೆ. ಅವರೇ(ಮೋದಿ) ಉತ್ತರಿಸಬೇಕು ಅಂತ ಜಾರಿಕೊಂಡರು. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಈಶ್ವರಪ್ಪ ಮೇಲಿಂದ ಮೇಲೆ ತಬ್ಬಿಬ್ಬಾದ ಸನ್ನಿವೇಶ ಉಂಟಾಯಿತು.