ಭವ್ಯ ಕುಂಭ ಮೆರವಣಿಗೆ

bkt-21-5
ಬಾಗಲಕೋಟೆ ನಗರದಲ್ಲಿ ಮಂಗಳವಾರ ನಡೆದ ಭವ್ಯ ಕುಂಭ ಮೆರವಣಿಗೆ
Published on

ಬಾಗಲಕೋಟೆ: ಇಲ್ಲಿನ ಕೆಂಪುರೋಡ ಬಳಿ ಬರುವ ಪಂಚಮುಖಿ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ವಾರ್ಷಿಕೋತ್ಸವದ ಅಂಗವಾಗಿ ಕೋಟೆನಗರಿಯಲ್ಲಿ ಮಂಗಳವಾರ ನಡೆದ ಭವ್ಯ ಕುಂಭ ಮೆರವಣಿಗೆ ಆಕರ್ಷಿಸಿತು.

ಉತ್ಸವ ಮೂರ್ತಿಯೊಂದಿಗೆ ಹೊಳೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಕುಂಭ ಮೇಳ ಬಸವೇಶ್ವರ ವೃತ್ತ, ಕುಮಟಗಿ ಶೋ ರೂಂ, ಲಕ್ಷಿ÷್ಮÃ ನಗರ, ಧನುಷ ಆಸ್ಪತ್ರೆ, ಧರ್ಮೂ ಕ್ರಾಸ್ ಮೂಲಕ ಪಂಚಮುಖಿ ಆಂಜನೇಯ ದೇವಸ್ಥಾನ ತಲುಪಿ ಮುಕ್ತಾಯಗೊಂಡಿತು. ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು. ೫೦೦ ಕ್ಕೂ ಹೆಚ್ಚು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಕಳೆ ತಂದರು.

ಇನ್ನು ಬುಧವಾರ ಬೆಳಗ್ಗೆ ೬ ಗಂಟೆಗೆ ಕೆರೂರ ಚರಂತಿಮಠದ ಡಾ.ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗುಳೇದಗುಡ್ಡ ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕೊಣ್ಣೂರ ಡಾ.ಶಿವಾನಂದ ಮಹಾಸ್ವಾಮಿಗಳು ಎಕಾದಶ ರುದ್ರ ಹೋಮ, ಶಿವ ಶಕ್ತಿ ಪೂಜೆ, ಮಹಾರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಅನ್ನ ಪ್ರಸಾದ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net