ಭರತನಹಳ್ಳಿಯ ಭ್ರಮರಾಂಬಾ ದೇವಿ ರಥೋತ್ಸವ

26 YLP 01 B
Published on

ಯಲ್ಲಾಪುರ: ಐದು ವರ್ಷಗಳಿಗೊಮ್ಮೆ ನಡೆಯುವ ತಾಲೂಕಿನ ಭರತನಹಳ್ಳಿಯ ಭ್ರಮರಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ಭವ್ಯ ರಥೋತ್ಸವದ ಮೂಲಕ ಸಂಭ್ರಮದ ಚಾಲನೆ ದೊರೆಯಿತು.

ಬುಧವಾರ ಬೆಳಗ್ಗೆ ಜಾತ್ರೆಯ ಧಾರ್ವಿುಕ ವಿಧಿ-ವಿಧಾನಗಳನ್ನು ಪೂರೈಸಿದ ನಂತರ, ಅಲಂಕರಿಸಿದ ಭವ್ಯ ರಥದಲ್ಲಿ ಭ್ರಮರಾಂಬೆಯನ್ನು ಕುಳ್ಳಿರಿಸಿ, ಮೆರವಣಿಗೆಯ ಮೂಲಕ ಜಾತ್ರಾ ಗದ್ದುಗೆಯವರೆಗೆ ಕರೆತರಲಾಯಿತು. ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವ ಮೂಲಕ ಜಾತ್ರೆ ಅಧಿಕೃತವಾಗಿ ಆರಂಭಗೊಂಡಿತು.

ಮಾ. 1ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಅಲ್ಲಿಯವರೆಗೆ ನಿತ್ಯ ಹಣ್ಣುಕಾಯಿ ಸೇವೆ, ಉಡಿ, ಹರಕೆ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net