ನೇಗಿಲು ಹಿಡಿದ ಜಿಲ್ಲಾಧಿಕಾರಿ ಮುಗಿಲನ್

1ANKOLA1
Published on

ಅಂಕೋಲಾ: ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮತ್ತು ಅವರ ಪತ್ನಿ ಅಶ್ವಿನಿ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ಆಯೋಜಿಸಿದ್ದ ಭತ್ತ ನಾಟಿ ಕಾರ್ಯಕ್ರಮದಲ್ಲಿ ಸ್ವತಃ ನೇಗಿಲು ಹಿಡಿದು ಉಳುಮೆ ಮಾಡುವ ಮೂಲಕ ಗಮನಸೆಳೆದರು.

ಸಾಂಪ್ರದಾಯಿಕವಾಗಿ ಕಂಬಳಿಯನ್ನು ತಲೆ ಮೇಲೆ ಹೊತ್ತು ಉಳುಮೆ ಜತೆಗೆ ಭತ್ತ ನಾಟಿ ಮಾಡಿ ರೈತರಲ್ಲಿ ಹುರುಪು ಮೂಡಿಸಿದರು.

ನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಅಂಕೋಲಾ ಬೇಸಾಯಗಾರರ ಸಮಿತಿಯವರು ಹಾಗೂ ಸ್ಥಳೀಯ ಕೃಷಿಕರು ಬೆಳೆಯುವ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಹಾಗೂ ಸರ್ಕಾರದಿಂದ ಸಿಗಬಹುದಾದ ಎಲ್ಲ ರೀತಿಯ ಸೌಲಭ್ಯ ನೀಡಲು ಪ್ರಯತ್ನಿಸುತ್ತೇನೆ ಎಂದರು.

ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಬೇಸಾಯಗಾರರ ಸಮಿತಿ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ, ಅಗಸೂರು ಗ್ರಾಪಂ ಅಧ್ಯಕ್ಷ ರಾಮಚಂದ್ರ ನಾಯ್ಕ ಮಾತನಾಡಿದರು. ತಹಸೀಲ್ದಾರ್ ಉದಯ ಕುಂಬಾರ, ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಕೆ. ನಾರ್ವೆಕರ್, ನಾಟಿ ವೈದ್ಯ ಹನುಮಂತ ಗೌಡ, ಉತ್ತಮ ಕೃಷಿಕ ದೇವರಾಯ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net