ಭಟ್ಕಳದಲ್ಲಿ ನೀರು ತುಂಬಲು ಐಆರ್ ಬಿ ಕಾರಣ

PHOTO-2022-08-07-18-49-27.jpg
Published on

ಭಟ್ಕಳ : ಪಟ್ಟಣದ ಮಣ್ಕುಳಿ, ಮೂಡಭಟ್ಕಳ ಭಾಗದಲ್ಲಿ ಹೆದ್ದಾರಿ ಪ್ರಾಧಿಕಾರ ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ 800 ಮನೆಗಳಿಗೆ ನೀರು ನುಗ್ಗಿದೆ ಎಂದು ಶಾಸಕ ಸುನೀಲ ನಾಯ್ಕ ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಜತೆ ಭಾನುವಾರ ಮಣ್ಕುಳಿ ಭಾಗದಲ್ಲಿ ನೆರೆಹಾನಿ ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಭಟ್ಕಳದಲ್ಲಿ ನೀರು ತುಂಬಲು ಚತುಷ್ಪಥ ನಿರ್ಮಾಣದ ಗುತ್ತಿಗೆ ಕಂಪನಿ ಐಆರ್ ಬಿ ಕಾರಣ ಹಾನಿಗೆ ರಾಷ್ಟ್ರೀಯ ಹೆದ್ದಾರಿ‌ ಪ್ರಾಧಿಕಾರವೇ ನೇರ ಹೊಣೆ ಎಂದರು.

ಹೆದ್ದಾರಿ ಬಂದಾಗಿನಿಂದ ವೆಂಕಟಾಪುರ ಭಾಗದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಕಳೆದ ಆಗಸ್ಟ್‌ 2ರಂದು ನೆರೆ ಬಂದಾಗಾ ಇಲ್ಲಿ ಆಳೆತ್ತರದ ನೀರು ನಿಂತಿರುವುದನ್ನು ನಾನು ನೋಡಿದ್ದೇ‌ನೆ. ಕೂಡಲೇ ಈ ಭಾಗದಲ್ಲಿ ಸಮರ್ಪಕ ಚರಂಡಿ ಮಾಡಿ ಎಂದು ವಿನಂತಿಸಿದರು.

 ಸ್ಥಳದಲ್ಲಿ ಹಾಜರಿದ್ದ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಲಿಂಗೆಗೌಡ ಮಾತನಾಡಿ, ಚರಂಡಿ ನಿರ್ಮಿಸಲು ಮಾಲ್ಕಿ ಜಮೀನಿನವರು ಸ್ಥಳ ಬಿಟ್ಟುಕೊಡದ ಕಾರಣ ವಿಳಂಬವಾಗಿದೆ ಎಂದರು.

ಸ್ಥಳೀಯರ ಮನವೊಲಿಸಿ ಜಾಗ ಬಿಟ್ಟುಕೊಡಲಾಗುವುದು. ಐಆರ್‌ಬಿಯವರು ಶೀಘ್ರದಲ್ಲಿ ಚರಂಡಿ ನಿರ್ಮಿಸಬೇಕು ಎಂದರು.‌ ಅದಕ್ಕೆ ಎನ್‌ಎಚ್ ಎಐ ಅಧಿಕಾರಿಗಳು ಒಪ್ಪಿ ಮಣ್ಕುಳಿಯಿಂದ‌ ಮೂಡ ಭಟ್ಕಳವರೆಗೆ ಮಳೆ ಮುಗಿದ ಮೇಲೆ ಚರಂಡಿ ನಿರ್ಮಿಸುವಂತೆ ಸೂಚಿಸಿದರು.

ಎಸಿ ಮಮತಾ ದೇವಿ, ತಹಸೀಲ್ದಾರ್‌ ಬಿ. ಸುಮಂತ, ಮುಖ್ಯಾಧಿಕಾರಿ ಎಂ.ಕೆ. ಸುರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net