

ಭಟ್ಕಳ: ಒಂದು ಸಮಯದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತೆರಳುವುದೆಂದರೆ ಮೂಗು ಮುರಿಯವ ಸಂದರ್ಭವಿತ್ತು. ಆದರೆ, ಈಗ ಹೈಟೆಕ್ ಆಸ್ಪತ್ರೆಯನ್ನು ಮೀರಿಸುವ ಹಂತಕ್ಕೆ ಬಂದಿರುವುದು ಸಂತಸದ ವಿಷಯ ಎಂದು ಶ್ರೀ ನಾಗಯಕ್ಷೇ ದೇವಸ್ಥಾನದ ರಾಮದಾಸ ಪ್ರಭು ಹೇಳಿದರು.
ಶುಕ್ರವಾರ ಭಟ್ಕಳ ಸರ್ಕಾರಿ ಆಸ್ಪತ್ರೆಗೆ 2 ಕೋಲ್ಡ್ ಸ್ಟೋರೇಜ್ ಯುನಿಟ್ ಅನ್ನು ದೇಣಿಗೆ ನೀಡಿ ಮಾತನಾಡಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆ ಜನರಿಗೆ ಸೇವೆ ನೀಡಲು ಎಲ್ಲ ರೀತಿಯಿಂದಲೂ ಪ್ರಯತ್ನಪಡುತ್ತಿದೆ. ಅದರಲ್ಲೂ ಡಾ. ಸವಿತಾ ಕಾಮತ ಅವರ ತಂಡ ಸರ್ಕಾರದ ಅನುದಾನ ನಂಬದೇ ದಾನಿಗಳ ಮೊರೆ ಹೋಗಿ ಆಸ್ಪತ್ರೆಗೆ ಬೇಕಾಗಿರುವುದನ್ನು ಸಂಗ್ರಹಿಸಿ ಬಡ ರೋಗಿಗಳಿಗೆ ಸೇವೆ ನೀಡುತ್ತಿರುವ ಶ್ಲಾಘನೀಯ ಎಂದರು. ನಂತರ ಭಟ್ಕಳ ಸರ್ಕಾರಿ ಆಸ್ಪತ್ರೆಗೆ 2 ಕೋಲ್ಡ್ ಸ್ಟೋರೇಜ್ ಯುನಿಟ್ ದೇಣಿಗೆ ನೀಡಿದ ಶ್ರೀ ನಾಗಯಕ್ಷೇ ದೇವಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಅವರನ್ನು ಆಸ್ಪತ್ರೆ ವತಿಯಿಂದ ಗೌರವಿಸಲಾಯಿತು. ಮಾಜಿ ಶಾಸಕ ಜೆ.ಡಿ. ನಾಯ್ಕ, ಉದಯ ಪೈ, ರಾಜೇಶ ಕಾಮತ, ಪದ್ಮನಾಭ ಪೈ, ಕೃಷ್ಣಾನಂದ ಪ್ರಭು, ಮಂಜುನಾಥ ಪ್ರಭು, ಶ್ರೀನಾಥ ಪೈ, ನಜೀರ್ ಖಾಸಿಂಜಿ, ನ್ಯಾಯವಾದಿ ಶ್ರೇಷ್ಠಿ, ಡಾ. ಭರತಕುಮಾರ, ಅಶೋಕ ಪೈ ಶಿರಾಲಿ, ಡಾ. ಲಕ್ಷ್ಮೀಶ, ಡಾ. ಸತೀಶ ಕುಮಾರ, ಡಾ. ಶ್ರುತಿ ಇದ್ದರು.</