ಭಟ್ಕಳ ಪಟ್ಟಣ ಪಂಚಾಯಿತಿಗೆ ಶಮೀಮ್ ಅಧ್ಯಕ್ಷೆ

9bkl5
Published on

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿ ಬಿಬಿ ಶಮೀಮ್ ಹನೀಫ್ ಶೇಖ್ ಮತ್ತು ಉಪಾಧ್ಯಕ್ಷೆಯಾಗಿ ಫರ್ಹಾನಾ ಇರ್ಷಾದ್ ಇಕ್ಕೆರಿ (ಡಾಟಾ) ಅವಿರೋಧವಾಗಿ ಆಯ್ಕೆಯಾದರು. ಎರಡನೇ ಅವಧಿಗಾಗಿ ಸೋಮವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ 20 ಸದಸ್ಯರು ಹಾಜರಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿತ್ತು. ಇವರೆಡು ಹುದ್ದೆಗಳಿಗೆ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ರವಿಚಂದ್ರ ಅವರು ಅವಿರೋಧ ಆಯ್ಕೆ ಘೊಷಿಸಿದರು. 20 ಸದಸ್ಯ ಬಲದ ಜಾಲಿ ಪಪಂನಲ್ಲಿ ತಂಜೀಂ ಬೆಂಬಲಿತ 11 ಪಕ್ಷೇತರರು, 6 ಕಾಂಗ್ರೆಸ್ ಹಾಗೂ ಮೂರು ಬಿಜೆಪಿ ಸದಸ್ಯರಿದ್ದಾರೆ. ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಬೀಬಿ ಶಮೀಮ್ ಈ ಹಿಂದೆ ಒಂದು ಅವಧಿಗೆ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net