ಭಗವಾಧ್ವಜ ಬದಲಿಸಲು ಮುಂದಾದವರಿಗೆ ಖಾಕಿ ಚಮಕ್

01
Published on

ನಿಪ್ಪಾಣಿ: ನಗರಸಭೆಯಲ್ಲಿ ರಾಷ್ಟ್ರಧ್ವಜದ ಎದುರೇ ಇದ್ದ ಭಗವಾ ಧ್ವಜ ಬದಲಿಸಲು ಮುಂದಾದ ನಗರಸಭೆ ಸದಸ್ಯರಿಬ್ಬರನ್ನು ಪೊಲೀಸರು ತಡೆದ ಘಟನೆ ಮಂಗಳವಾರ ನಡೆದಿದೆ.

ಎನ್‌ಸಿಪಿ ಬೆಂಬಲಿತ ಸಂಜಯ ಸಾಂಗಾವಕರ ಹಾಗೂ ವಿನಾಯಕ ವಡೆ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೂ ಮುನ್ನ ಪಕ್ಕದಲ್ಲಿದ್ದ ಭಗವಾ ಧ್ವಜ ಹಳೆಯದಾಗಿದೆ ಎಂದು ಬದಲಾಯಿಸಲು ಮುಂದಾದರು.

ಸ್ಥಳದಲ್ಲಿದ್ದ ಸಿಪಿಐ ಸಂಗಮೇಶ ಶಿವಯೋಗಿ, ಶಹರ್ ಪೊಲೀಸ್ ಠಾಣೆ ಪಿಎಸ್‌ಐ ಉಮಾದೇವಿ ಹಾಗೂ ಸಿಬ್ಬಂದಿ ಅವರನ್ನು ತಡೆಹಿಡಿದರು. ಪೊಲೀಸರೊಂದಿಗೆ ಇಬ್ಬರೂ ಸದಸ್ಯರು ವಾಗ್ವಾದಕ್ಕೆ ಇಳಿದರು. ತಕ್ಷಣ ಇಬ್ಬರನ್ನು ಕೆಳಗಿನ ಅಂತಸ್ತಿನ ಸಭಾಗೃಹಕ್ಕೆ ಕರೆತಂದು ಬುದ್ಧಿವಾದ ಹೇಳಲಾಯಿತು.

ಸಂಜಯ ಸಾಂಗಾವಕರ ಎಂಇಎಸ್ ಸದಸ್ಯ ಕೂಡ ಹೌದು. ಇಬ್ಬರ ದುಂಡಾವರ್ತನೆಗೆ ಬ್ರೇಕ್ ಹಾಕಿದ ಪೊಲೀಸರಿಗೆ ಸ್ಥಳೀಯ ಕನ್ನಡಪರ ಸಂಘಟನೆಗಳು ಮೆಚ್ಚುಗೆ ಸೂಚಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net