ಭಗವಂತನೊಲಿಸಲು ಭಜನೆ ಆಪ್ತ ಮಾರ್ಗ

0410KLB 02
Published on

ಕಲಬುರಗಿ: ಭಜನೆಯಿಂದ ಜನರ ಜೀವನ ಬದಲಾಗಿದೆ. ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆಯಿಂದ ಗುಣಮುಖವಾದ ಘಟನೆಗಳಿವೆ. ಭಜನೆ ದೇವರ ಉಪಾಸನೆ ಆಗಿದೆ ಎಂದು ಶ್ರೀ ಮರತೂರಿನ ಶ್ರೀ ಹುಣಚಿರಾಯ ಮುತ್ಯಾ ಹೇಳಿದರು.
ಜಿಡಿಎ ಲೇಔಟ್‌ನ ಶಿವಶರಣಾನಂದ ಆಶ್ರಮ ಕಾಲನಿಯಲ್ಲಿ ಶುಕ್ರವಾರ ಹಮ್ಮಿಕೊಂಡ ವಚನಗಳಿಂದ ಭಜನೆ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಭಜನೆಯಲ್ಲಿ ತೊಡಗಿದವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದು ಹೇಳಿದರು.
ಶಿವರಾಜ ಅಂಡಗಿ ಮಾತನಾಡಿ, ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ವೈಚಾರಿಕ ಚಿಂತನೆ, ನ್ಯಾಯದ ಪರಿಕಲ್ಪನೆಗಳಿವೆ. ಅವುಗಳನ್ನು ಸರಳ ಕನ್ನಡ ಭಾಷೆಗಳಲ್ಲಿ ಭಜನೆ ಮೂಲಕ ಹಾಡಿಸಿದರೆ ಜನರ ಹೃದಯಗಳಿಗೆ ತಲುಪುತ್ತವೆ ಎಂದರು.
ವಕೀಲ ಶಿವಲಿಂಗಪ್ಪ ಅಷ್ಟಗಿ, ಕವಿ ಎಂಎನ್.ಸುಗAಧಿ ಮಾತನಾಡಿದರು.
ತಿಪ್ಪಣ್ಣ ಬಟಗೇರ, ಮಲ್ಲಿಕಾರ್ಜುನ ವಿಶ್ವಕರ್ಮ, ಶಿವಶರಣಪ್ಪ ಅಗಸಿಮನಿ, ಶರಣಮ್ಮ ಸೇಡಂ, ಮಹಾದೇವಿ ಸೇಡಂ, ಮಹಾದೇವಿ ಬೀರನಳ್ಳಿ, ಚಿದಾನಂದ ಬುಳ್ಳಾ, ವಿಜಯಲಕ್ಷಿö್ಮÃ, ಶಿವಶರಣಪ್ಪ ಪೂಜಾರಿ, ಮಹಾದೇವಿ, ವಿದ್ಯಾಶ್ರೀ, ಡಾ.ವಿವೇಕನಂದ ಬುಳ್ಳಾ ಇತರರಿದ್ದರು. ವಿನೋದಕುಮಾರ ಜನೇವರಿ ಸ್ವಾಗತಿಸಿದರು. ಸಾಯಿಕುಮಾರ ರುಸ್ತಂಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net